Followers

Sunday 26 August 2012

ಮಳೆರಾಯ ….ಬಾ ಬೇಗ




ಮಳೆರಾಯ ….ಬಾ ಬೇಗ
ಮಳೆರಾಯ ಬಾ ಬೇಗ ಸುರಿಸು ನಿನ್ನ ಮಳೆಯ
ಒಣಗಹತ್ತಿವೆ ಕೆರೆ- ಭಾವಿ ಉಳಿಸು ನಮ್ಮ ಬೆಳೆಯ.

ನಮ್ಮಜ್ಜನ ಕಾಲದಲ್ಲಿದು ನೀರಾವರಿ ಜಮೀನು
ಈಗಾಗಿದೆ ನೋಡು ಮರಭೂಮಿಗೆ ಸಮಾನು.

ಕೆರೆ- ಭಾವಿಗೆ ಹೋಗುತ್ತಿದ್ದೆ ಒಯ್ಯಾರದಿ ನಾನು
ಒಂದು ತೊಟ್ಟು ನೀರಿಲ್ಲಾ ಎಲ್ಲಿ ಹೋಗಲಿ ಇನ್ನು?

ಮುಗಿಲೆತ್ತರ ಏರುತ್ತಿವೆ ಎಲ್ಲ ಧಾನ್ಯಗಳ ಬೆಲೆ
ಮಮ್ಮಲ ಮರುಗುತ್ತಿರುವ ಜನಕೆ ತೋರು ನಿನ್ನ ಸೆಲೆ.

ನೂರೆಂಟು ಬಿರುದುಗಳು ನಮ್ಮ ಭೂಮಾತೆಗೆ
ಎದೆ ಬಿರುದು ಕೂಗಿಹಳು ನಿನ್ನ ಹನಿ ನೀರಿಗೆ.

ಹರಿಯುತ್ತಿದ್ದವು ನದಿಗಳು ಬೆಟ್ಟ ಕಾಡುಗಳಲ್ಲಿ
ಹಿಡಿದಿಟ್ಟಹರೀಗ ಆಣೆಕಟ್ಟುಗಳಲ್ಲಿ.

ಕಾವೇರಿ ನಮ್ಮವಳು ಬೇಕು ನಮಗೆ ಯಮುನೆ,
ಬಿಡಿಸಪ್ಪ ಈ ಜಗಳ ಸುರಿ ಒಂದೇ ಸಮನೆ.

ಚಂದಾ / ಸವಿತಾ . ಇನಾಮದಾರ್.


2 comments:

  1. ಮಳೆರಾಯನ ಕರೆಯುವ ಕೂಗು , ಕವಿತೆಯ ವಿಷಯ ವಸ್ತುವಾಗಿ , ಭಾವನೆಗಳ ಬಾನಂಗಳದಲ್ಲಿ ತೆರೆದಿಟ್ಟು , ಮಳೆಯನ್ನು ಭುವಿಗೆ ತರುವ ವಿಚಾರದಲ್ಲಿ ಕವಿತೆಯ ರಚನೆ ಸೊಗಸಾಗಿದೆ .. :)

    ReplyDelete
  2. ಹೃತ್ಪೂರ್ವಕ ಧನ್ಯವಾದಗಳು ||ಪ್ರಶಾಂತ್ ಕ್ಜಟಾವಕರ್ ಜಿ.. ಮಳೆರಾಯ ಅಂತೂ ಬರುವನು ಈ ಇಳೆಗೆ.

    ReplyDelete