Followers

Tuesday, 14 August 2012

ತಾಯೇ ಭಾರತಾಂಬೆ.


                                                              ತಾಯೇ ಭಾರತಾಂಬೆ

ತಾಯೇ ತಾಯೇ ಭಾರತಾಂಬೆ
ಧೈರ್ಯದ ವರವಾ ನೀಡೇ ಅಂಬೆ
ಅಭಯ ಹಸ್ತವ ದಯಪಾಲಿಸೆ ಅಂಬೇ.

ಹಗಲಿರುಳೆನ್ನದೆ ಹೋರಾಡಿದೆವು
ಕೊನೆಗೊಮ್ಮೆ ಸ್ವಾತಂತ್ರವ ಪಡೆದೆವು
ಇನ್ನೆಂದಿಗೂ ನಾವ್ ಅಡಿಯಾಳ್ ಆಗೆವು
ಒಗ್ಗಟ್ಟಿನಲಿ ಸೇವೆಯ ಗೈಯ್ಯುವೆವು.

ಮಳೆ ಬಂದರೂ ಸರಿ, ನೆರೆ ಬಂದರೂ ಸರಿ,
ರಾಷ್ಟ್ರ ಧ್ವಜದ ಗೌರವವನು ಕಾಯುವೆವು
ತಾಯ್ನಾಡಿಗೆಂದಿಗೂ ಕಳಂಕ ಬಾರದಂತೆ
ಉಸಿರಿರೋವರೆಗೂ ಹರುಷದಲಿ ಕಾದಾಡುವೆವು.

ಮಮತೆಯ ಮಡಿಲು ತುಂಬಿರಲಿ
ಪ್ರೀತಿಯ ಹೊನಲು ಹರಿಯುತ್ತಿರಲಿ
ತನು ಮನವೆಲ್ಲಾ ನಿನಗೆ ಅರ್ಪಿಸಿ
ರೋಷ- ದ್ವೇಷಗಳ ತ್ಯಜಿಸುವೆವು ತಾಯೇ..

ಚಂದಾ / ಸವಿತಾ ಇನಾಮದಾರ್.

5 comments:

  1. ಅಮಿತ ದೇಶ ಭಕ್ತಿಯ ಸೂಸೋ ಕವನ.
    ಮತ್ತೆ ಗುಲಾಮಗಿರಿ ಬೇಡವೆನ್ನುವ ಧ್ಯೇಯ ಕನಸ್ಸಾಗದಿರಲಿ ಓ ಭಾರತ ಭಾಗ್ಯ ವಿಧಾತ...

    ReplyDelete
  2. ಹೃತ್ಪೂರ್ವಕ ಧನ್ಯವಾದಗಳು ..ನಿಮ್ಮ ಮಾತು ನಿಜವಾಗಲಿ ಬದ್ರಿಯವರೆ..

    ReplyDelete
  3. ರಾಷ್ಟ್ರ ನಮನ ತಾಯ ನಮನ ಧ್ವಜ ನಮನ ಎಲ್ಲಾ ಕೊಡಿದ ತ್ರಿವೇಣೀ ಸಂಗಮದಂತಿದೆ ಸವಿತಾ ನಿಮ್ಮ ಕವನ... 💐💐💐👌👌👌🙏🙏🙏

    ReplyDelete
    Replies
    1. ನಿಮ್ಮ ಸುಂದರ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು ಆಜಾದ್ ಭಾಯಿ. 🙏🥰

      ನಿಮ್ಮ ಹೆಸರಿನಲ್ಲೇ ಅಡಗಿರುವುದು ಸ್ವಾತಂತ್ರ್ಯದ ಮೂಲ ಅರ್ಥ. ನೀವು ಬಲು ಪುಣ್ಯವಂತರು. 🙏

      Delete