Followers

Wednesday, 23 December 2015

ಹೆಸರಿನಲ್ಲೇನಿದೆ ?

ಹೆಸರಿನಲ್ಲೇನಿದೆ ?
ಎಲ್ಲವೂ ಹೆಸರಿನಲ್ಲೇ  ಸಿಲುಕಿದೆ
 ಹೆಸರಿನ ಪ್ರತಿ ಅಕ್ಷರದಲ್ಲೂ ಹೊಸತನ ಅಡಗಿದೆ.

ಎನ್ನಮ್ಮನಿಟ್ಟ ಪ್ರೀತಿಯ ಹೆಸರನು ಅತ್ಯಮ್ಮ ಬದಲಾಯಿಸಿದಳು
ಹಿರಿಯರ ಇಷ್ಟವನರಿತು ಸುಮ್ಮನೇ ಹೂಂಗುಟ್ಟು ಎಂದಿದ್ದಳು.

ಬದಲಾಯಿಸುವುದಕ್ಕೂ ಮುನ್ನ ಕೇಳಿದ್ದರೆನ್ನ
ಬದಲಾಯಿಸಲೇ ನಿನ್ನ ಪ್ರೀತಿಯ ಹೆಸರನ್ನ?

ಎನ್ನೊಪ್ಪಿಗೆ ಸಿಕ್ಕ ಮೇಲೆ ಬದಲಾಗಿತ್ತು ಕುರುಹು..
ಅಡಗಿತ್ತು ನಾ ಹುಟ್ಟಿದಾಗ ಹಾರಿಸಿದ್ದ ತುಪಾಕಿಗಳ ಸ್ವರವು.

ಎರಡು ದಶಕಗಳಾದರೂ ಅನಿಸದಿದು ಎನ್ನದೇ ಹೆಸರೆಂದು
ಆ ಹೆಸರಿನಲ್ಲೇ ಎನ್ನುಸಿರು ಸಿಲುಕಿದೆ ಇಂದು.

ಆದರೂ ಎನ್ನ ಅಸ್ಥಿತ್ವವನು ಮರೆಯಲು 
ಬಿಟ್ಟಿಲ್ಲ ನನ್ನ ಪ್ರೀತಿಯ ನಲ್ಲ .
ಅದೇ ಚಂದದ ಹೆಸರನ್ನುಮಧುರವಾಗಿ 
ಸದಾ ಹೃದಯಾಳದಿಂದ ಕರೆಯುವನಲ್ಲ.

ಚಂದಾ / ಸವಿತಾ ಇನಾಮದಾರ್.  


Saturday, 28 November 2015

ಮಾಂಗಲ್ಯ ಭಾಗ್ಯ.

ನಲ್ಲಾ..

ಕಾರ್ತಿಕ ಮಾಸದಲಿ ಹುಣ್ಣಿಮೆಯ ದೀಪದೊಡನೆ
ನಿನ್ನ ಪ್ರೀತಿಯ ಹೊಳಪು ಎನ್ನ ಕಣ್ಣುಗಳಲಿ ಬೆಳಗಿದೆ..

ಮುತ್ತುಗಳ ಸುರಿಮಳೆಯಲ್ಲಿ ವಿರಹದಿ ಬಾಡಿದ ಮೊಗವು
ರಾಗ ರಂಜಿತವಾಗಿ ಮತ್ತೆ ಮುತ್ತು ಬೇಕೆನುತಿದೆ.

ಜನುಮಜನುಮದ ನಮ್ಮೀ ಮಧುರ ಬಂಧನವು
ಮಾಂಗಲ್ಯದ ಭಾಗ್ಯದಿಂದ ಮತ್ತೆ ಪವಿತ್ರವಾಗಿದೆ.

ಪ್ರತಿಕ್ಷಣವೂ ನಿನ್ನುಸಿರ ಹಸಿರೆನ್ನ ಪಾಲಿಗೆ ನೀಡೆಂದು
  ಆ ಮಮತಾಮಯಿ ಮಾತೆಗೆ ನಾ ಬೇಡುತ್ತಿರುವೆ. 


ಸವಿತಾ ಇಮಾದಾರ್… 

Thursday, 23 July 2015

ಒಲುಮೆ ಕುಸುಮ

ಇನಿಯ                      
ಹೇಗೆ ಹೇಳಲಿ ಏನು ಹೇಳಲಿ
ತಿಳಿಯದಾಗಿದೆ ನನಗೆ ಇನ್ನೂ
ಮೊದಲ ಬಾರಿ ಒಲುಮೆ ಕುಸುಮ
ಅರಳಿ ನಿಂತ ಪರಿಯನು

                             ನಿನ್ನ ಒಂದು ನೋಟವೇ ಸಾಕು           
                            ಎನ್ನ ಮುದುಡಿದ ಮುಖವರಳಲು
                            ನಿನ್ನ ಸ್ವರದ ಮೋಡಿಯಲ್ಲಿ
                            ನನ್ನ ನಾನೇ ಮೈಮರೆಯಲು 

ಯಾರಿಗೆ ಹೇಳಲಿ  ಮನದ ಮಾತು
ಹೃದಯದಲ್ಲಿ  ನೆನೆಸಿರುವೆ
ಬೇಗ ಬಾರೆಯ ಎನ್ನ ಇನಿಯ
ನಿನಗಾಗಿ  ಕಾಯುತಿರುವೆ. 

ಚಂದಾ / ಸವಿತಾ  ಇನಾಮದಾರ್ 

Saturday, 27 June 2015

ಒಲವಾಮೃತ


 ಒಲವಾಮೃತ

ಮೊದಲ ನೋಟದಲ್ಲೇ 
ನನಗರಿವಿಲ್ಲದೇ ಪ್ರೀತಿಯ ಬೀಜಾಂಕುರವಾಗಿತ್ತು
ಇದು ಅರ್ಥವಾಗೋಕೂ ಮುನ್ನ
ನೀ ಕಾಣದೇ ಮಾಯವಾದಾಗ
ತಲೆ ಕೆಟ್ಟು ಹೋಗಿತ್ತು.

ನಿನಗಾಗಿ ಕಾದೆ
ಸಪ್ತಸಾಗರವ ದಾಟಿದೆ
ನನ್ನ ಮೇಲೆ ನಿನಗೆ ಪ್ರೀತಿಯಿಲ್ಲ
ಎಂದು ತಿಳಿದು ನಾ ಸುಮ್ಮನಾದೆ

ಕ್ಷಣಗಳು ದಿನಗಳಾದವು
ದಿನ ವರುಷಗಳಾದವು
ಅಂತೂ ನೀ ಇಂದು ಮುಂದೆ ಬಂದು ನಿಂತಾಗ
ಏನೂ ತೋಚದೇ ನಿನ್ನ ನೋಡುತ್ತಲೇ ನಿಂತೆ.

ಆಗ 
ನಿನ್ನ ಹೊಳೆವ ಕಂಗಳಲ್ಲಿ ನನ್ನ ಬಿಂಬವ ಕಂಡೆ
ನನ್ನ ಪ್ರೀತಿಯ ಬಳ್ಳಿ ನಲುಗದೇ
ನಿನ್ನಾವರಿಸಿ ಹಬ್ಬಿರುವುದನು ನೋಡಿದೆ.

ನಿನ್ನ ಭಾವನೆಯ ಕುಸುಮ ನಸು ನಗುತ್ತಾ
ಸುಂದರ ಮುಖದಲ್ಲಿ ಅರಳಿದಾಗ
ಮೌನದಲೇ ಮನಸುಗಳು ಒಂದಾದವು.
ಒಲವಾಮೃತದ ಸವಿ ಉಣಬಡಿಸಿದವು.

ಸವಿತಾ ಇನಾಮದಾರ್


ಒಲವಾಮೃತ
ಒಲವಾಮೃತ
ಮೊದಲ ನೋಟದಲ್ಲೇ
ನನಗರಿವಿಲ್ಲದೇ ಪ್ರೀತಿಯ ಬೀಜಾಂಕುರವಾಗಿತ್ತು
ಇದು ಅರ್ಥವಾಗೋಕೂ ಮುನ್ನ
ನೀ ಕಾಣದೇ ಮಾಯವಾದಾಗ
ತಲೆ ಕೆಟ್ಟು ಹೋಗಿತ್ತು.

ನಿನಗಾಗಿ ಕಾದೆ,
ಸಪ್ತಸಾಗರವ ದಾಟಿದೆ
ನನ್ನ ಮೇಲೆ ನಿನಗೆ ಪ್ರೀತಿಯಿಲ್ಲ
ಎಂದು ತಿಳಿದು ನಾ ಸುಮ್ಮನಾದೆ.

ಕ್ಷಣಗಳು ದಿನಗಳಾದವು
ದಿನ ವರುಷಗಳಾದವು
ಅಂತೂ ನೀ ಇಂದು ಮುಂದೆ ಬಂದು ನಿಂತಾಗ
ಏನೂ ತೋಚದೇ ನಿನ್ನ ನೋಡುತ್ತಲೇ ನಿಂತೆ.
ಆಗ 

ನಿನ್ನ ಹೊಳೆವ ಕಂಗಳಲ್ಲಿ ನನ್ನ ಬಿಂಬವ ಕಂಡೆ
ನನ್ನ ಪ್ರೀತಿಯ ಬಳ್ಳಿ ನಲುಗದೇ
ನಿನ್ನಾವರಿಸಿ ಹಬ್ಬಿರುವುದನು ನೋಡಿದೆ.

ನಿನ್ನ ಭಾವನೆಯ ಕುಸುಮ ನಸು ನಗುತ್ತಾ
ಸುಂದರ ಮುಖದಲ್ಲಿ ಅರಳಿದಾಗ
ಮೌನದಲೇ ಮನಸುಗಳು ಒಂದಾದವು.
ಒಲವಾಮೃತದ ಸವಿ ಉಣಬಡಿಸಿದವು.

ಸವಿತಾ ಇನಾಮದಾರ್. 

Monday, 1 June 2015

ವರುಣನ ಚುಂಬನ.ಅಹಾ..ಅಹಾ... 
ವರುಣನ ಆಗಮನದಿಂದ 
ಇಳೆಯ ಬಾಡಿದ ಮೊಗವರಳಿತು
ಮಣ್ಣಿನ ಘಮಲಿನಲ್ಲಿ ಮಿಂದು 
ಎನ್ನ ಹೃದಯ ಹಾಡಿತು..
ಇಂದೇ ಪ್ರಥಮ ಸಿಂಚನ.. ಅಹಾ..
ಭುವಿಗೆ ವರುಣನ ಚುಂಬನ..


ಚಂದಾ / ಸವಿತಾ ಇನಾಮದಾರ್.


Wednesday, 1 April 2015

ಇನಿಯಾ.. ಏಕೆ ಹೀಗೆ ಕಾಡುವೆ ?


ಹ್ಯಾಗೆ ಹೇಳಲಿ ನಿನಗೆ? ನಾ ಏನೆಂದು ತಿಳಿಸಲಿ?
ಮನಸಿನಲಿ ನುಸುಳಿರುವೆ, ಮುಂಗುರುಳ ತೀಡುತಿರುವೆ
ಮಿಂಚಿನಂತೆ ಕಂಡು ಕಾಣದಂತೆ ಮಾಯವಾಗುವೆ
ಇನಿಯಾ ಏಕೆ  ಹೀಗೆ ಕಾಡುವೆ ? ಎನ್ನನ್ನೇಕೆ  ನೀ ಕಾಡುವೆ??

ವಸಂತ ಋತುವಿನಲ್ಲಿ ಹೊಸ ಚಿಗುರಿನಂತೆ
ಎನ್ನ ಮನಸು ನೋಡು ಮತ್ತೆ ಚಿಗುರುತಿದೆ
ತಂಗಾಳಿ ಬೀಸುತ್ತ ನಿನ್ನ ಪಿಸುಮಾತು ಸಾರುತಿದೆ
ಹಳೆಯ ನೆನಪುಗಳ ಸುರುಳಿ ಉರುಳುತ್ತ ಬರುತಿದೆ

ಮೈಮನದಲಿ ನವರಾಗ ಉಕ್ಕಿಹರಿಯುತಿದೆ
ನಿನ್ನ ಒಂದು ನೋಟಕ್ಕೆ , ಆ ಮಧುರ ಸ್ಪರ್ಷಕ್ಕೆ
ಅನುದಿನವೂ ನಿನ್ನ ಸಾಮೀಪ್ಯವನ್ನು  ಬಯಸುತಿರುವೆ
ಕಾಯುತ್ತ ಕುಳಿತಿರುವೆ ಇನಿಯಾ ನೀ ಬೇಗ ಬಾರೆಯಾ??

ಚಂದಿರ ಹೇಳುತಿಹನು ಸುಂದರ ಜೋಗುಳ
ಕಂಗಳಲ್ಲಿ ಮಿನುಗುತಿದೆ ಹೊಳಪು ನಕ್ಷತ್ರಗಳ
ನಮ್ಮ ಕನಸು ನನಸಾಗಲೆಂದು ಮಧುರ ಮಿಲನವಾಗಲೆಂದು
ಬೇಡಿಕೊಳ್ಳೋಣ ಬಾ ಇನಿಯಾ ಆ ದೇವರಲ್ಲಿ
ಮತ್ತೊಮ್ಮೆ ತರುವನು ಸಂತೋಷ ನಮ್ಮ ಬಾಳಿನಲ್ಲಿ.


ಚಂದಾ / ಸವಿತಾ ಇನಾಮದಾರ್.