Followers

Thursday 7 April 2016

ಯುಗಾದಿ






ದುರ್ಮುಖಿನಾಮ ಸಂವತ್ಸರವಿದ್ದರೂ ನಲ್ಲಾ..
ಸುಮುಖಿಯಾಗಿಸಿ ಬಾ ಸವಿಯೋಣ ಬೇವು ಬೆಲ್ಲ.

ಈ ಬೆಲ್ಲದ ಸಿಹಿ ಮರೆಸುವುದು
ಜೀವನದಲ್ಲಿ ಬರುವ ಬೇವಿನಂತಹ ಕಹಿಯನ್ನು.
ಎರಡರ ಸಮರಸದಿಂದ
ಸಾಗಿಸೋಣ  ನಮ್ಮ ಬಾಳ ನೌಕೆಯನ್ನು.

ಒಲವಿನ ಮಾತಿನಿಂದ
ಮರೆಸುಯುವೆ ನಿನ್ನೆ ಸಿಡುಕಿದ್ದನ್ನು
ನನ್ನ ಚಿನ್ನಾ ಎಂಬ ಮೃದು ಕರೆಯಲ್ಲಿ
ಮರೆಸುಯುವೆ ನನ್ನಿರುವನ್ನು.

ಯುಗ-ಯುಗಗಳೇ ಕಳೆದರೂ
ಅಳಿಯದೆಮ್ಮ ಪ್ರೀತಿಯ ಬೆಸುಗೆ
ನೀ ನನ್ನವನಾಗಿರುವುದೇ
ಎನಗೆ ಪ್ರತಿ ಯುಗಾದಿಯ  ಕೊಡುಗೆ !!

ಚಂದಾ / ಸವಿತಾ ಇನಾಮದಾರ್



ಚಂದಾ / ಸವಿತಾ ಇನಮದಾರ್.