ವಿರಹ..
ನಿನ್ನ ವಿರಹದಲ್ಲಿ
ನಾ ಬಳಲಿ ಬೆಂಡಾದೆ
ನಿನ್ನಗಲಿಕೆಯ ನೋವು
ಜಗವನ್ನೇ ಬದಲಾಯಿಸಿದೆ.
ತಂಗಾಳಿಯ ಮೃದು ಸ್ಪರ್ಷದಲ್ಲಿ
ಆ ಆತ್ಮೀಯತೆಯಿಲ್ಲಾ,
ಅಂಗಳದ ತುಂಬೆಲ್ಲಾ
ನಿನ್ನನ್ನೇ ಅರಸುತ್ತಿದೆಯಲ್ಲಾ??
ಸೂರ್ಯದೇವ ಉದಯಿಸುವಾಗ
ಕೇಳುವನು ನನ್ನ
ಬರಲೇ ನಾ ಭುವಿಗೆ
ಕೊಡಲಿನ್ನೊಂದು ವಿರಹದ ದಿನವನ್ನ.
ಪಕ್ಷಿಗಳ ಕಲರವದಲ್ಲಿ
ಆ ಮಧುರ ಇಂಚರವಿಲ್ಲ
ಪನ್ನಾಗ ಸಂಪಿಗೆಯಲ್ಲೂ
ಮೊದಲಿನ ಕಂಪಿಲ್ಲ.
ನದಿಯ ಕಲರವ ನನ್ನ
ಅಣಕಿಸುತ್ತಿಹುದು ನೋಡು
ಈ ವಿರಹ ತಾಳಲಾರೆ
ನೀ ಬೇಗ ಬಂದು ಬಿಡು.
ಚಂದಾ / ಸವಿತಾ ಇನಾಮದಾರ್.
ಇರುವುದೆಲ್ಲಾ ಇಲ್ಲವೆಂಬಂತೆ ಭಾವನೆ ಮೂಡುವುದು ಅತೀ ಇಷ್ಟವಾದದ್ದು ದೂರವಾದಾಗ ಮಾತ್ರ .. ಆ ವಿಚಾರದಲ್ಲಿ ಈ ಕವಿತೆಯ ರಚನೆ ತುಂಬಾ ಸರಿಯಾಗಿದೆ .. ಮೇಡಂ .. :)
ReplyDeleteಮನಸ್ಸಿನ ಭಾವನೆಗಳ ಪದಗಳು ಎಷ್ಟು ಬರೆದರೂ ಸಹ ಮನದಲ್ಲಿ ಬರೆಯದೇ ಉಳಿದ ಕೆಲವು ಮಾತುಗಳು ಇರುತ್ತವೆ .. ಅದು ಸ್ವಲ್ಪ ಸ್ವಲ್ಪ ಈ ಚಿತ್ರದಲ್ಲಿ ಸಿಗುತ್ತದೆ .. :)
ಪ್ರಶಾಂತ್ ಖಟಾವಕರ್ ಜಿ..ತುಂಬು ಹೃದಯದ ಧನ್ಯವಾದಗಳು . ಮನದ ಮಾತುಗಳನ್ನು ಕಂಗಳು ಹೇಳುತ್ತವೆ.. ಆದರೆ ಅದನ್ನು ನೋಡಲಾದರೂ ಆತ ಬರಬೇಕಲ್ಲವೇ??? ಈ ವಿರಹವೆಂಬ ವೇದನೆಯಿಂದ ಮುಕ್ತಿ ಕೊಡಿಸಬೇಕಲ್ಲವೇ??
ReplyDeleteವಿರಹಕಿಂತಲೂ ವಿಷವೆಲ್ಲಿದೆ? ಉತ್ತಮ ಮನೋ ವೇದಕ ಕವನ.
ReplyDeletetumbaa chennagide
ReplyDeleteಧನ್ಯವಾದಗಳು ಬದ್ರಿನಾಥ್ ಜಿ..
ReplyDeleteನೀವು ಹೇಳಿದ ಹಾಗೆ ವಿರಹಕ್ಕಿಂತಲೂ ವಿಷವ್ಯಾವುದು ?? ಕಟು ಸತ್ಯ...
ಧನ್ಯವಾದಗಳು anveshi anamika ji..
ReplyDelete'ಸೂರ್ಯದೇವ ಉದಯಿಸುವಾಗ ಕೇಳುವನು ನನ್ನ
ReplyDeleteಬರಲೇ ನಾ ಭುವಿಗೆ ಕೊಡಲಿನ್ನೊಂದು ವಿರಹದ ದಿನವನ್ನ !'
ಈ ಸಾಲುಗಳು ತುಂಬ ಹಿಡಿಸಿದವು. ಆದರೆ ಗಾಲಿಬ್ ನ ಸತ್ವ ಮತ್ತು ಸತ್ಯ ನಿಮ್ಮ ಕವಿತೆಯಲ್ಲಿ ಮೂಡಿಬರಬೇಕು ಎಂಬುದು ನನ್ನ ವೈಯಕ್ತಿಕ ಆಪೇಕ್ಷೆ.
KARANIK ಅವರೆ.ಆ ಮಹಾನ್ ಕವಿ ಗಾಲಿಬನ ಸತ್ವ ಹಾಗೂ ಸತ್ಯ ನನ್ನ ಕವಿತೆಯಲ್ಲಿ ಕಂಡ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ReplyDelete