Followers

Monday, 30 July 2012

ಓ ಗೆಳೆಯ…ಬಾನಿನಿಂದ ಚಂದಿರ ದೂರ ಹೋಗಬಹುದೆ ?
ಧರೆಯಿಂದ ನೀರು ಇಂಗಿ ಹೋಗಬಹುದೆ ?
ನೀ ಏಕೆ  ನನ್ನಿಂದ  ದೂರವಾಗಿ  ಹೋದೆ  ?
ಈ ವಿರಹವ ತಾಳೆನು ಓ ಇನಿಯ ನೀ ಏಕೆ ಹೀಗಾದೆ ?

ನೀ ನೆಲೆತಿರುವೆ  ಎನ್ನ ಮನದಾಳದಲಿ
ಎನ್ನ ಬಿಟ್ಟು ಎಲ್ಲಿ ಹೋದೆ ಹುಸಿ ಮುನಿಸಿನಲಿ ?
ಆತುರದಿ-ಕಾತುರದಿ ನಾ ಕಾಯುತ್ತಾ  ಕುಳಿತಿರುವೆ
ನೀ ಬಂದೇ ಬರುವೆ ಎಂಬ ಭರವಸೆಯಲಿ ಬೇಯುತ್ತಿರುವೆ.

ನಿನ್ನ ಬಾಹು ಬಂಧನಕೆ  ಕಾಯುತಿದೆನ್ನ ತನು ಮನ
ನಿನ್ನ ದರ್ಷನಕ್ಕಾಗಿ ಕಾಯುತಿವೆ ಎನ್ನ ನಯನ
ನೀ ಬಂದೇ ಬರುವೆಯೆಂಬ  ಭರವಸೆಯಿದೆ ಎನಗೆ
‘ಪ್ರೇಮ ಸಿಂಚನದ’ ಧಾರೆ ಎರೆವೆ ನಮ್ಮ ಮಧುರ ಪ್ರೀತಿಗೆ.

ಚಂದಾ / ಸವಿತಾ ಇನಾಮದಾರ್.


Wednesday, 25 July 2012

ರಕ್ತ ದಾನ.


ರಕ್ತ ದಾನ..
‘ಕಾರ್ಗಿಲ್’’ ಎಂದಾಕ್ಷಣ ಬರೆಯುವರು ಕವನ
ಒಂದೋ ವೀರರಸದಲ್ಲಿ ಇಲ್ಲವೇ ಕರುಣಾ ರಸದಲ್ಲಿ.
ಆದರೆ ನಾ ಬರೆಯುತ್ತಿರುವೆ ಇದನು ‘ನವ ರಸಗಳಲ್ಲಿ’.

ರಕ್ತದಾನ ಮಾಡುವುದು ಎಷ್ಟೊಂದು ಸುಲಭ.
ಅದರ ಪರಿಣಾಮ ಕಾಣಸಿಗುವುದು ಅಷ್ಟೇ ದುರ್ಲಭ.
ಬಗೆಬಗೆಯ ಜನರ ರಕ್ತ ಹರಿಯಿತು ಕಾರ್ಗಿಲ್ ಸೈನಿಕರುಗಳ ನರನಾಡಿಗಳಲ್ಲಿ
ತೋರತೊಡಗಿತು ನೋಡಿ ಅದರ ಬಣ್ಣ ಅವರೆಲ್ಲರ ನಡೆ- ನುಡಿಗಳಲ್ಲಿ.

ಭಿಕ್ಷುಕನ ರಕ್ತ ಪಡೆದೊಬ್ಬ ಯೋಧ ಪಾಕಿಸ್ತಾನದ ಸೈನಿಕನ ಬೆನ್ನು ಹತ್ತಿದ,
ಆತನ ಶರಟನ್ನು ಜಗ್ಗುತ್ತಾ, ದೈನ್ಯತೆಯಿಂದ ಬೇಡಿದ,
“ನಿಮ್ಮ ಅಲ್ಲಾನ ಹೆಸರಲ್ಲಿ ದೆದೇ ಬಾಬಾ, ನಿಮ್ಮ ಮೌಲಾನ ಹೆಸರಲ್ಲಿ ದೆದೇ ಬಾಬಾ,
ನಿನ್ನ ಜೀವಾತೋ ಮುಝಕೋ ದೆದೇ , ಇಲ್ಲಾ ಈ ಜಾಗಾ ತೋ ಖಾಲೀ ಕರದೆ “
ಎಂದಾತನಿಗೆ ಗುಂಡಿಕ್ಕಿದ ಸೀದಾ ಮುನ್ನಡೆದ.

ಹೀರೋನ ರಕ್ತ ಪಡೆದೊಬ್ಬ ಯೋಧ
ರಾತ್ರಿಯ ಕಗ್ಗತ್ತಲೆಯಲ್ಲೂ ಪ್ಯಾಂಟನ್ನು ಕೊಡವಿದ, ಕ್ರಾಪನ್ನು ಸವರಿದ
‘ಮಾರ್ಚ್’ ಎಂಬ  ಧ್ವನಿ ಕೇಳಿದೊಡೆ
‘ಫೈಟ್ ಮಾಸ್ಟರ್ ಬಂದಿಲ್ಲಾ, ನನ್ನ ಡ್ಯುಪ್ ಸರಿಯಿಲ್ಲ.
ನೋ ಲೈಟ್, ಸೋ ನೋ `ಆಕ್ ಶನ್, ಈ ಫಿಲ್ಮ್ ಫ್ಲಾಪ್ ಆದ್ರೆ ನನ್ಯಾರೂ ಕೇಳೊಲ್ಲಾ"
ಎನ್ನುತ್ತಲೇ ಥಟ್ಟನೇ ಗನ್ನು ಕೆಳಗಿಟ್ಟ , ಗಾಡಿಯಲ್ಲಿ ಕುಳಿತುಬಿಟ್ಟ.

ಅಧ್ಯಾಪಕನ ರಕ್ತ ಪಡೆದೊಬ್ಬ ಯೋಧ
ಹಿಂದೆ- ಮುಂದೆ ನೋಡದೆಯೇ ಬೆಟ್ಟವನ್ನು ಹತ್ತಿದ.
ಪಾಕ್ ಸೈನಿಕರನ್ನು ನೋಡುತ್ತಲೇ ಮುಖ ಗಂಟಿಕ್ಕಿದ.
‘ಎಲೈ ಹುಡುಗರೇ, ಪುಂಡ- ಪೋಕರಿಗಳಂತೇಕೆ ಮಾಡುವಿರಿ?
ಇದು ನಿಮ್ಮ ಸರಹದ್ದಲ್ಲ, ನಿಮಗೇಕೆ ತಿಳಿದಿಲ್ಲ?
ಇತಿಹಾಸ , ಭೂಗೋಲದ ಪಾಠ ನಿಮಗೆ ಸರಿಯಾಗಿ ಕಲಿಸಿಲ್ಲ.
ಓಡುವಿರೋ ಇಲ್ಲಾ ಹತ್ತು ಸಲ ಬೆಟ್ಟ ಹತ್ತಿಳಿಯುವಿರೋ?
ಎಂದು ಗದರಿಸುತ್ತ ಅವರನ್ನೋಡಿಸಿದ.

ವಿದ್ಯಾರ್ಥಿಯ ರಕ್ತ ಪಡೆದೊಬ್ಬ ಯೋಧ
ಮಣಭಾರದ ಗನ್ನುಗಳನ್ನು ಶಾಲೆಯ ಬ್ಯಾಗಿನಂತೆ ಹೊತ್ತ.
ಚಟ-ಚಟನೇ ಬೆಟ್ಟವನ್ನು ಒಂದುಸಿರಿನಲ್ಲೇ ಹತ್ತುತ್ತಾ
ಮುಂದೆ ಸಿಕ್ಕ ಸೈನಿಕರನ್ನು ಪಟ- ಪಟನೇ ಉರುಳಿಸುತ್ತಾ
ಪುನಃ ಸರಸರನೇ ಇಳಿಯುತ್ತಲೇ ,” ಅಬ್ಬೆ, ಇದೋ ನಾನಿಂದು ಬೇಗ ಬಂದೆ’ ಎನ್ನುತ್ತಲೇ ನಸುನಕ್ಕ.

ರಾಜಕಾರಣಿಯ ರಕ್ತ ಪಡೆದೊಬ್ಬ ಯೋಧ
ಬಂದೂಕನ್ನು ಹಿಡಿಯದೇ ಕೈ ಮುಗಿದು ಹಲ್ಕಿರಿದ.
“ನನ್ನ ಅಣ್ಣ- ತಮ್ಮಂದಿರೆ, ನನ್ನ ನೆಚ್ಚಿನ ಪ್ರಜೆಗಳೇ,
 ನನ್ನ ಬಾಡಿ ಗಾರ್ಡ್ ಬರಲಿ, ನನ್ನ ಜನರೂ ಬರಲಿ,
ಮೊದಲು ಅವರಲ್ಲಿಗೆ ಹೋಗಿ ಬರಲಿ, ಆಮೇಲೆ ನಾ ಹೋಗುವೆ,
ಹೈ ಕಮಾಂಡಿಗೆ ಇಂಪ್ರೆಸ್ ಮಾಡುವೆ” ಎನ್ನುತ್ತಾ ದೊಡ್ಡ ಕಲ್ಲಿನ ಮೇಲೆ ಕುಳಿತು ಬಿಟ್ಟ.

ಹೆಣ್ಣೊಬ್ಬಳ ರಕ್ತ ಪಡೆದೊಬ್ಬ ಯೋಧ
ಹಿಂತಿರುಗಿ ನೋಡದೆಯೇ ಬೆಟ್ಟವನ್ನೇರಿದ.
“ನನ್ನ  ಗಂಡನನ್ನು ಕೊಂದವರೇ, ನನ್ನ ಕಂದನ ಕೈ ಕಡಿದವರೇ,
ನನ್ನ ನಂದನವನವನ್ನು ಧ್ವಂಸಮಾಡಿ  ನನ್ನ ಅಬಲೇ ಎಂದು ಕರೆದವರೇ,
ಬನ್ನಿ ಕುನ್ನಿಗಳೇ ಬನ್ನಿ, ನಿಮ್ಮ ನೆತ್ತರು ಹರಿಸಿ ನಮ್ಮ ಭೂಮಾತೆಗೆ  ಅಭಿಷೇಕ ಮಾಡುವೆ”
ಎಂದೆನ್ನುತ್ತಾ ಕಾಳಿಯಂತೆ ಕಾದಾಡಿ ತನ್ನ ಸೇಡನ್ನು ತೀರಿಸಿಕೊಂಡ.

ಈ ರಕ್ತದಾನದ ಪರಿಣಾಮ ಅದಲು- ಬದಲು ಆದಲ್ಲಿ
ಎಂಥ ಸನ್ನಿವೇಶ ಕಾಣಬಹುದು??
ಸೈನಿಕರಿಗೆ ಈ ರಾಜಕಾರಣಿಗಳ ರಕ್ತಕ್ಕಿಂತಲೂ
ವಿದ್ಯಾರ್ಥಿಯ ಇಲ್ಲಾ ಹೆಣ್ಣೊಬ್ಬಳ ರಕ್ತದ ಹನಿಯನ್ನು ಕೊಟ್ಟಲ್ಲಿ ದೇಶದಲ್ಲಿ
ನಾಲ್ಕು ದೇಶಭಕ್ತರಾದರೂ ಉಳಿಯಬಹುದಲ್ಲವೇ???

                  ಚಂದಾ / ಸವಿತ ಇನಾಮದಾರ್.


Tuesday, 24 July 2012

ನನ ಕಂದಾ ನೀ ನನ್ನ ಉಸಿರು...
¸ÉÆAlPÀÌ GqÀzÁgÀ PÀlPÉÆAqÀÄ ¸ÀgÀzÁgÀ
qÀÄUÀÄ-qÀÄUÀÄ £ÀqÀPÉÆÃvÀ ºÉÆAmÁ£À,
dA§ªÀ §r0iÀÄÄvÀÛ PÉÃPÉ0iÀÄ ºÁPÀÄvÀÛ
¨ÉÆZÀÄÑ ¨Á¬Ä vÉUÉzÀÄ £ÀPÁÌ£À.

©zÀÝgÀÆ ©qÀªÀ®è, §rzÀgÀÆ ©qÀªÀ®è
£ÀqÀzÉà wÃgÉ£ÉA§ bÀ®zÁUÀ
CAUÀ¼À- ºÉÆvÀì® JqÀªÀÅvÁÛ- vÀqÀªÀÅvÁÛ
UÀĪÀÄämÉUÀ¼ÀÄ PÀAqÁªÀ vÀ°0iÉƼÀUÀ.

PÀAUÀ¼Éà vÀÄA©gÀ°, ¸ÀÄA§¼À ¸ÀÄjwgÀ°,
£À£À PÀAzÀ£À ªÉÆUÀªÉà §®Ä ZÉAzÁ,
ºÀUÀ°gÀļÀÄ zÀÄrvÀzÀ zÀtªÀÅ ºÉÆÃUÀĪÀÅzÁvÀ£À
CªÀiÁä' JA§ vÉÆzÀ®Ä £ÀÄr¬ÄAzÀ.

ªÀÄ£É0iÀĪÀgÉà ºÉzÀj¹zÀgÀÆ,
£ÉgÉ0iÀĪÀgÉà ¨ÉzÀj¹zÀgÀÆ
CAdzÉà ªÀiÁqÀĪÀ¤ªÀ ¥ÀÅAqÁmÁ,
CªÀÄä£À ªÀÄAPÁzÀ ªÀÄÄRªÀ£ÀÄß £ÉÆÃqÀÄvÀÛ¯É
ªÀÄÄVzÀÄ ºÉÆÃUÀĪÀÅzÁvÀ£À vÀÄAmÁl.

¤Ã¼À £Á¹PÀzÀªÀ¼ÉÆÃ, PÉAzÁªÀgÉ ªÀÄÄRzÀªÀ¼ÉÆÃ,
ºÉÃVgÀ¨ÉÃPÀ0iÀiÁå ¤£À ZɮĪÉ?
dj0iÀÄ ¹ÃgÉ0iÀÄ£ÀÄßlÄÖ HjUËvÀt PÉÆlÄÖ
dA§¢ ªÀiÁqÀÄªÉ ¤£À ªÀÄzÀĪÉ.

 «dæA§uɬÄAzÀ £Á ªÀiÁqÀÄªÉ ¤£À ªÀÄzÀĪÉ
¤£Àß aAvɬÄAzÀ £Á£ÁUÀ ªÀÄÄPÀÛ¼ÁUÀĪÉ
¸ÀºÀzsÀ«ÄðtÂ0iÀÄ£ÀÄß ZÉ£ÁßV CxÀð ªÀiÁrPÉƼÀî¨ÉÃPÀÄ
¥Àæw ºÀAvÀzÀ®Æè DPÉ0iÉÆA¢UÉ ¤Ã¤gÀ¯ÉèÉÃPÀÄ.

ºÀÄnÖzÀÝ ªÀÄ£É ¨É¼ÀUÀÄ, PÀnÖzÀÝ £Áqï ¨É¼ÀUÀÄ
J¯ÉèqÉUÀÆ ¥À¸Àj¸À° ¤£Àß 0iÀıÀzÀ PÁAw
F ¸ÀÄAzÀgÀ ¨sÀÆ«Ä0iÀÄ zÀ±À-¢PÀÌ£ÀÆß DªÀj¸À°,
¹UÀĪÀÅzÀÄ DUÀ £À£Àß ªÀÄ£À¹UÉ ±ÁAw.

PÁgÀt-

£À£ÀÄß¹gÀÄ ¤£Àß®èqÀVzÉ PÀAzÁ,
¤£Àß «d0iÀÄzÀ¯ÉÃè £À£Àß d0iÀÄ«zÉ PÀAzÁ.
ªÀÄÄ£ÀÄßUÀ먀 ¤Ã ºÀÄqÀÄPÀÄ ºÉƸÀ ¢±É
EzÉà £À£Àß fêÀ£ÀzÀ ªÀĺÁzÁ¸É

                                    ಚಂದಾ.ಸವಿತಾ ಇನಾಮದಾರ್

ಚುಟುಕು...


                                                ಚುಟುಕು…
ಚುಟುಕು ಬರೆಯುವಾಗ
ಕುಡಿದೆ ಚಹಾದ ಒಂದು ಗುಟುಕು
ಸೋರಿತು ಮಳೆಯಿಂದ ಮಾಳಿಗೆ
ಹನಿ ಬಿದ್ದವು ತಟಕು- ತಟಕು…

ಚಂದಾ / ಸವಿತಾ ಇನಾಮದಾರ್

Sunday, 22 July 2012

ನಗೆಯು ಬರುತಿದೆ ಎನಗೆ ..


ನಗೆಯು ಬರುತಿದೆ
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ…
ಥಟ್ಟನೇ ಬದಲಾದ ಮನುಜನ ಮನವ ಕಂಡು
ನಗೆಯು ಬರುತಿದೆ…
ಸುರೆಯ ಮತ್ತಿನಲ್ಲಿ ಅಲೆಯುತ್ತಿದ್ದವನ ಕೈಯಲ್ಲಿ
ರುದ್ರಾಕ್ಷಿಯ ಸರವ ಕಂಡು ನಗೆಯು ಬರುತಿದೆ..
ಸ್ವೇತ ವಸ್ತ್ರವ ಧರಿಸಿ, ಕಾಮ – ಕ್ರೋಧವ ತ್ಯಜಿಸದೇ
ಇತರರನ್ನು ವಂಚಿಸುವುದ ಕಂಡು ನಗೆಯು ಬರುತಿದೆ..
ದೇವರೆಂದರೆ ದೂರ ಹಾಯುತ್ತಿದ್ದವ ಈಶನ
ಮೋಹಪಾಷದಲ್ಲಿ ಸಿಲುಕಿದಂತೆ ನಟಿಸುವುದನು ಕಂಡು
ನಗೆಯು ಬರುತಿದೆ…
ಇಂತಹ ಗೋಮುಖ ವ್ಯಾಘ್ರರ ಸಂಗ ಬಯಸುವ
ಮೂಢ ಜನರನು ಕಂಡು ಎನ್ನ ಮನ ಮೌನವಾಗಿ ರೋದಿಸುತ್ತಿದೆ....

ಚಂದಾ / ಸವಿತಾ ಇನಾಮದಾರ್.

Saturday, 21 July 2012

ಕಪ್ಪು ಶಿಲೆ

 


 


‘ ಕಪ್ಪು ಶಿಲೆ’ , ‘ ಕಪ್ಪು ಶಿಲೆ’  ಎಂದಣಕವಾಡುತ್ತಿದ್ದರು
ನನ್ನೊಡಹುಟ್ಟಿದ ಅಕ್ಕ-ತಮ್ಮಂದಿರು.
ಆಗ ಮಮತೆಯ ಮಡಿಲಲ್ಲಿ ಅಡಗಿಸುತ್ತಿದ್ದಳೆನ್ನ
 ತಾಯಿ ನರ್ಮದೆ ಕೊಟ್ಟಳು ಅಪಾರ  ಪ್ರೀತಿಯನ್ನ.

                       ಹೀಗಿರುವಾಗೊಂದು ದಿನ ಹಲವು ಆಗಂತುಕರು
                       ಹೊತ್ತುಕೊಂಡು ಹೋದರೆನ್ನ ಅಪರಿಚಿತ ಸ್ಥಳಕ್ಕೆ.
                       ಒಡಹುಟ್ಟಿದವರನ್ನಗಲಿ ಒಬ್ಬಂಟಿ ನಿಂತಾಗ
                       ಹಲುಬಿದೆಯನ್ನ ತಾಯ ಮೃದು ಸ್ಪರ್ಷಕ್ಕೆ.

ಯಾರು ತಂದರಿಲ್ಲಿ ನನ್ನ? ಏಕೆ ತಂದರಿಲ್ಲಿ ಎನ್ನುತ್ತಾ
ಭಯದಿಂದ ಥರ-ಥರನೇ ಕಂಪಿಸಿದೆ.
ಸುತ್ತಿಗೆ ಚಾಣಿಗಳ ಪೆಟ್ಟು ಥಟ್ಟನೇ ಬಿದ್ದಾಗ
ಒದ್ದಾಡಿದೆ ವಿಲ-ವಿಲನೇ ನೋವು ತಾಳಲಾರದೆ.

              ಈ ರೀತಿಯ ದಿನಚರ್ಯೆ ನಡೆಯಿತೆಷ್ಟೋ ದಿನ,
                ಆದರೂ ಕರಗಲಿಲ್ಲಾ ಅವರೆಲ್ಲರ ಕಠೋರ ಮನ.
                ಹಗಲಿರುಳೆನ್ನದೇ ಆ ಪೆಟ್ಟುಗಳನ್ನು ಸಹಿಸಲೇ ಬೇಕಾಯ್ತು,
                ನೋಡ-ನೋಡುತ್ತಲೇ ಯನ್ನ ಮಹಾಕಾಯ ಕೃಷವಾಗಿ ಹೋಯ್ತು ಆದರೆ,

ಇಂದೇಕೋ ಸೂರ್ಯೋದಯಕ್ಕೂ ಮೊದಲು
ಸುವಾಸಿತ ಪನ್ನೀರೆನ್ನ ಮೈಮೇಲೆ ಬಿತ್ತು,
ಹಾಲು-ಮೊಸರು, ತುಪ್ಪ, ಜೇನುತುಪ್ಪದಿಂದೆನಗೆ
ಮಜ್ಜನವೇಕೆ ಮಾಡಿಸಿದರೆಂದು ತಿಳಿಯದಾಯ್ತು.

                 ಭಕ್ತಿ-ಪ್ರೀತಿಯಿಂದೆನ್ನನು ತಂದು ನಿಲ್ಲಿಸಿದರೀಗ
                 ಅಮೃತ ಶಿಲೆಯ ಸುಂದರ ಮಂಟಪದ ಮೇಲೆ,
                ಕೊಟ್ಟರು ಕೈಯ್ಯಲ್ಲೊಂದು ಕೊಳಲು
             ಇಟ್ಟರು ರತ್ನ ಖಚಿತ ಕಿರೀಟ ಎನ್ನ ಗುಂಗುರು ಶಿರದ ಮೇಲೆ.

ಗಂಟೆ-ಜಾಗಟೆ, ಶಂಖನಾದ ವೇದಘೋಷದ ಜೊತೆಗೆ
ಸುವಾಸಿನಿಯರ ಸಿರಿಕಂಠವೂ ಕೇಳತೊಡಗಿತು.
‘ಶ್ಯಾಮ ಸುಂದರಾ’ , ‘ಕೃಷ್ಣ ಮುರಾರಿ’ ಎಂದೆನ್ನುವ ಧ್ವನಿ
ದಶ-ದಿಕ್ಕುಗಳಲ್ಲಿ ಪ್ರತಿಧ್ವನಿಸತೊಡಗಿತು.
              ಈಗ

                ಅದೆಷ್ಟೋ ಭಕ್ತಾದಿಗಳ ಮೊರೆಯನ್ನು ಕೇಳುತ್ತಾ
               ಮುಗುಳು ನಗೆಯ ಬೀರುತ್ತಾ ನಿಂತಿರುವೆನೀಗ ಬೃಂದಾವನದಲ್ಲಿ
               ಹಣೆಯ ಬರಹಕ್ಕೆ ಹಲುಬದೇ, ಬಾಳಸಮರ ಎದುರಿಸುತ್ತಾ
               ಮುನ್ನುಗ್ಗುವ ನನ್ನ ಮಾತೆಯನ್ನು ನೆನೆಯುತ್ತಲಿರುವೆ.
               ಆಕೆಯ ಮಮತೆಗೆ ನಮಿಸುತ್ತಲಿರುವೆ.
                                                                                                                                                               
                                                                                                         ಚಂದಾ/ ಸವಿತಾ ಇನಾಮದಾರ್