Followers

Thursday, 27 June 2013

ಗಂಡನ ಗೋಳ್ಯಾಟ…  ನನ್ನ ಪ್ರೀತಿಯ ಪಮ್ಮಿ…  
 ನನ್ನ  ಮಕ್ಕಳ ಮೆಚ್ಚಿನ  
ಗುಂಡು ಗುಂಡಗಿನ ಮಮ್ಮೀ..
ಇನ್ನಾರ ಮಾಡ ಸ್ವಲ್ಪ ನೀ
ತಿನಸೂದು - ತಿನ್ನೂದು ಕಮ್ಮಿ..
ಇಲ್ಲss ..ನೀ ಯಾರಿಗೂ ಇಲ್ಲಾ ಕಮ್ಮಿ,
ಆದ್ರ ನಿನ್ನss  ನೋಡಿ ನಾಚಲಿಕ್ಕೆ ಹತ್ತ್ಯಾವಲ್ಲ
ನಮ್ಮ ಧಾರವಾಡದ ಎಮ್ಮಿ..
ಏ ಪಮ್ಮೀ…ನಿಂದ್ರ..ನಿಂದ್ರು..
ಸ್ವಲ್ಪ ನನ್ನ ಮಾತು  ಕೇಳಿಲ್ಲೆ..
ಛೇ..ಛೇ.. ಬ್ಯಾಡ … ಬ್ಯಾಡಾ ರಾಣೀ..
ನಾ ಹೀಂಗಂತೀನಿ ಅಂತ
ಮಾರೀ ಸೊಟ್ಟ ಮಾಡ ಬ್ಯಾಡಾ
ಮತ್ತ ಜಿಮ್ಮಿಗೂ  ನೀ ಸೇರಕೋ ಬ್ಯಾಡಾ
ಅಲ್ಲಿಗೆ ಹೋಗಿ  ಎಷ್ಟ ಒದ್ದಾಡಿದ್ರೂನೂ ,
ಬೇಕಾದಷ್ಟು ರೊಕ್ಕಾ ಸುರುದ್ರೂನೂ ,
ನೀ ಆಗಂಗೇ ಇಲ್ಲಾ ಬಿಡು ‘ ಕಮ್ಮಿ.. ‘
ಆದ್ರೂ ಆದ್ರೂ..  ನೀನssss..  ನನ್ನ..
 ಪ್ರೀತಿಯ ಡುಮ್ಮ ಡುಮ್ಮಗಿನ .. ಪಮ್ಮಿ..
ನನ್ನ ಮುದ್ದಿನ ಮಕ್ಕಳ  ಪ್ರೀತಿಯ ಮಮ್ಮೀ…

ಚಂದಾ / ಸವಿತಾ ಇನಾಮದಾರ್.

Thursday, 20 June 2013

ಛೇ..ಛೇ...ಏನಿದು ವರುಣಾ…ಛೇ..ಛೇ...ಏನಿದು ವರುಣಾ
ಮೊದಲು ಮುತ್ತಿನ ಮಳೆಗೆರೆದೆ
ಪ್ರೀತಿಯ ಉತ್ತುಂಗಕ್ಕೇರಿಸಿ  ಇಂದು 
ನೀನ್ಯಾಕೆ ಆ ಮತ್ತಿನಲಿ ಮುತ್ತೂ ಕಾಣದಂತೆ
ಎಲ್ಲವನು ಕೊಚ್ಚಿಕೊಂಡು ಹೋದೆ??? 

ಎಷ್ಟು ಹುಡುಕಿದರೂ ಸಿಗುತ್ತಿಲ್ಲವಲ್ಲಾ
ಆ ನನ್ನ ಪುಟ್ಟು ಅರಮನೆ..
ಗುರುತು ಸಿಗದಷ್ಟು ಬದಲಾಯಿಸಿ ಬಿಟ್ಟೆ
ನಿಲ್ಲಿಸು ಹರಿಯುವುದ ಒಂದೇ ಸವನೆ.

ಇದು ನಿನ್ನ ಸೇರುವ ಭುವಿಯ 
ಹಂಬಲ ತೀರಿಸುವ ಪರಿ ಏನು??
ಒಡಲ ಬಿರಿದು, ಎಲ್ಲೆಡೆಗೂ ಹರಿದು
ಈಗ ಸುಮ್ಮನೆ ನೋಡುತ್ತಿರುವೆ ಏನು?? 

ಹೇ ವರುಣ...ಇನ್ನು ಈ ಇಳೆ ತಾಳಲಾರಳು ನಿನ್ನ ಪ್ರಕೋಪ .
ತತ್ತರಿಸಿ ,ದಿಕ್ಕುಗಾಣದೆ ಅಲೆಯುತಿಹರು
ಕೇಳಲಾರೆಯಾ ಅವರೆಲ್ಲರ ಪ್ರಲಾಪ??? 

ಚಂದಾ / ಸವಿತಾ ಇನಾಮದಾರ್.