Followers

Monday 29 April 2013

ಚುನಾವಣಾ ಅಭ್ಯರ್ಥಿ-




ತನ್ನ ಮನೆಯಲ್ಲಿ ಮುಚ್ಚಿಡುವನು ಅನ್ನ
ಇತರರ ಮನೆಗೆ ಹಾಕುವನು ಕನ್ನ. 
ತಲೆಬಾಗಿ  ಹಲ್ಕಿರಿಯುವನು 
ಓಟು ಕೊಡುವವರೆಗೆ 
ಕುರ್ಚಿಯ ಮೇಲೆ ಕುಳಿತೊಡನೆ 
ಹುಡುಕಿದರೂ ಕಾಣನವನು ಕೆಳಗಿಳಿಯುವವರೆಗೆ.
ತನ್ನ ಗೇಣು ಹೊಟ್ಟೆಯ ನೆಪದಲ್ಲಿ
ಇತರರಿಗೆ ನೇಣು ಹಾಕುವನು ಈ ನಯವಂಚಕ
ಈ ಬಾರಿಯಾದರೂ ಎಚ್ಚರದಿ, ಒಮ್ಮತದಿ ಆರಿಸಿ ತನ್ನಿ
ಆಗಲಿ ಆತ ನಿಮ್ಮ 'ಹಿತಚಿಂತಕ'.

 ಚಂದಾ / ಸವಿತಾ ಇನಾಮದಾರ್

2 comments:

  1. ಒಳ್ಳೆಯ ಚುನಾವಣಾ ಎಚ್ಚರಿಕೆ ಅಕ್ಕ. ಭೇಷಾಯಿತು.

    ReplyDelete
  2. ಧನ್ಯವಾದಗಳು @Badarinath Palavalli.

    ReplyDelete