ತನ್ನ ಮನೆಯಲ್ಲಿ
ಮುಚ್ಚಿಡುವನು ಅನ್ನ
ಇತರರ ಮನೆಗೆ ಹಾಕುವನು
ಕನ್ನ. 
ತಲೆಬಾಗಿ  ಹಲ್ಕಿರಿಯುವನು 
ಓಟು ಕೊಡುವವರೆಗೆ 
ಕುರ್ಚಿಯ ಮೇಲೆ ಕುಳಿತೊಡನೆ 
ಹುಡುಕಿದರೂ ಕಾಣನವನು ಕೆಳಗಿಳಿಯುವವರೆಗೆ.
ತನ್ನ ಗೇಣು ಹೊಟ್ಟೆಯ
ನೆಪದಲ್ಲಿ 
ಇತರರಿಗೆ ನೇಣು ಹಾಕುವನು ಈ ನಯವಂಚಕ 
ಈ ಬಾರಿಯಾದರೂ ಎಚ್ಚರದಿ, ಒಮ್ಮತದಿ ಆರಿಸಿ ತನ್ನಿ
ಆಗಲಿ ಆತ ನಿಮ್ಮ 'ಹಿತಚಿಂತಕ'. 
 ಚಂದಾ / ಸವಿತಾ ಇನಾಮದಾರ್
 
 
ಒಳ್ಳೆಯ ಚುನಾವಣಾ ಎಚ್ಚರಿಕೆ ಅಕ್ಕ. ಭೇಷಾಯಿತು.
ReplyDeleteಧನ್ಯವಾದಗಳು @Badarinath Palavalli.
ReplyDelete