ಓ ನನ್ನ ಒಲವೇ
ನೀ ಇನ್ನೂ ಎಲ್ಲಿ
ಕುಳಿತಿರುವೆ ??
ಮುಂಜಾನೆಯಿಂದ ನಿನ್ನ ಸನಿಹಕ್ಕಾಗಿ
ಪರಿತಪಿಸುತ್ತಾ ನಾ ಕಾಯುತ್ತಿರುವೆ.
ನಿನ್ನಾಲಿಂಗನದಲ್ಲಿ
ನನ್ನನ್ನೇ ನಾ ಮರೆಯುವೆ
ಬಾರೆಯಾ ನೀ ಬೇಗಾ
ಯಾಕೆ ಹೀಗೆ ಕಾಡುವೆ??
ಬಿಡು ನಿನ್ನ ಈ ಮೊಂಡಾಟ
ಎನಗೆ ಹೊಸದೇನಲ್ಲಾ
ಹಾಗಾಗೇ ಆ ಬ್ರಹ್ಮ
ನಮ್ಮಿಬ್ಬರ ಗಂಟು ಹಾಕಿರುವನಲ್ಲಾ.
ಚಂದಾ / ಸವಿತಾ ಇನಾಮದಾರ್.
ಪರಸ್ಪರತೆ, ವಿರಹ ಮತ್ತು ತುಸು ವಿರಸಗಳೇ ಒಲವಿನ ಸಾಕ್ಷಾತ್ಕಾರಕ್ಕೆ ಮೆಟ್ಟಿಲುಗಳು. ಇಲ್ಲಿನ ಕರೆಯು ಅಂತರಾಳದ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ. ಇಷ್ಟವಾಯಿತು.
ReplyDeleteಧನ್ಯವಾದಗಳು ತಮ್ಮಾ @Badarinath Pavalli .. ಈ ಸುಮಧುರ ಜೀವನ ಸರಸ- ವಿರಸಗಳ ಸಂಗಮ ಅಲ್ವೇ?? ...
ReplyDeleteತುಂಬಾ ಚೆನ್ನಾಗಿದೆ ಮೆಡಮ್
ReplyDeleteಧನ್ಯವಾದಗಳು @Yallappa Narasannavar ಅವರೆ.
ReplyDelete