ಆಘಾತ ಪಡದಿರು ನೀನು
ಮೊದಲ ಬಾರಿ ನೋಡುತ್ತಿರುವಿಯೇನು??
ಇದುವೇ ರಾಜಧಾನಿ
ದೆಹಲಿ
ಜನ ಸಾಯುವರು ಅಲ್ಲಿ-
ಇಲ್ಲಿ.
ಸಾಗರದ ತೆರೆಯಂತೆ ನೋಡಿದೆಡೆ ಜನಸಂಖ್ಯೆ
ಸಾಲದಾಗಿದೆಯಲ್ಲಾ
ಇದ್ದ ಸೌಕರ್ಯ ಜೋಕೆ !!
ಸವಡಿಲ್ಲದವರ ಹಾಗೆ
ಓಡುವರು ನೋಡಿಲ್ಲಿ
ಕೊಚ್ಚಿಕೊಂಡು ಹೋಗುತಿಹರು
‘ ಅಪಘಾರದ ಸೆಳವಿನಲ್ಲಿ.
ಯಮದೂತರಂತೆ ಬರುತ್ತಿಹವು
ವಾಹನ
ಸೊಳ್ಳೆಯ ಹಾಗೆ ಹೊಸಕುವವ
ಮುಗ್ಧ ಜನರ ಜೀವನ.
ಅತೀ ವೇಗದಿ ನಡೆಸದಿರು ನೀ ವಾಹನ ಚಾಲಕ
ನೀನೇ ನಿನ್ನ ಅಮೂಲ್ಯ ಜೀವನದ ಮಾಲೀಕ.
ನಿನ್ನ ತಪ್ಪಿಲ್ಲದಿದ್ದರೂ
ಅದಕ್ಕೆನ್ನುವರು ‘ಅಪಘಾತ’
ನೀ ಹುಶಾರಾಗಿರದಿದ್ದರೆ
ಆಗುವುದು ಬಲು ದೊಡ್ಡ ಅನಾಹುತ.
ಚಂದಾ
/ ಸವಿತಾ ಇನಾಮದಾರ್.
ಆಧುನಿಕೀಕರಣದ ಅಭಿ ಶಾಪ ಅವಘಡಗಳು. ಅಪಘಾತಗಳು ಬದುಕನ್ನೇ ಅಳಿಸಿ ಹಾಕುವ ಕ್ರೂರಿಗಳು. ಶೋಕಿಗಾಗಿ ಗಾಡಿ ಓಡಿಸುವ, ಸುಮ್ಮನೆ ಅಂಡಲೆಯುತ್ತಾ ರಸ್ತೆ ಜಾಮಿಗೆ ಕಾರಣವಾಗುವ, ಪಾನ ಮತ್ತರಾಗಿ ಯಾರಿಗೋ ಗುದ್ದುವ ಸವಾರರೇ ಇತ್ತೀಚೆಗೆ ಹೆಚ್ಚುತ್ತಿದ್ದಾರೆ.
ReplyDeleteಎಲ್ಲರೂ ಅರಿತುಕೊಳ್ಳಲೇ ಬೇಕಾದ ಅರಿವಿಟ್ಟು ವಾಹನ ಚಲಾಯಿಸಿ ಎಂದು ಹೇಳುವ ಈ ಕವನ ನನಗೆ ನೆಚ್ಚಿಗೆಯಾಯಿತು.
ಧನ್ಯವಾದಗಳು ತಮ್ಮಾ@Badarinath Palavalli. ನಿಜ ಇವೆಲ್ಲಾ ಆಧುನಿಕೀಕರಣದ ಅಭಿ ಶಾಪ ಅವಘಡಗಳು. ದಿನಾಲೂ ಸಾಯುವವರಿಗೆ ನೋಡೋವ್ರೂ ಇಲ್ಲಾ.. ಅಳೋವ್ರೂ ಇಲ್ಲಾ..ನಮ್ಮದೇನಾದ್ರೂ ತಪ್ಪಾದ್ರೆ ಹೊಡೆದಾಟ,ಕೈಯಲ್ಲಿ ಗನ್ನು ಇಲ್ಲಾ ಚೈನು ಹಿಡಿದು ಓಡಾಡುವ ಜನರ ಗುಂಪು ಬಂದೇ ಬಿಡುತ್ತೆ. ಇಲ್ಲಿ ಆರಾಮಾಗಿ, ಸರಾಗವಾಗಿ ಜೀವನ ನಡೆಸೋದು ತುಂಬಾ ಕಷ್ಟ.
ReplyDelete