ಓ ನನ್ನ
ಚಲುವೆ
ಹುಣ್ಣಿಮೆಯ ಪೂರ್ಣ
ಚಂದಿರನ ಕಂಡು
ಬರಸೆಳೆದಪ್ಪುತ್ತಾ
ಉಲಿದ ನನ್ನ ಇನಿಯ..
ಓ ನನ್ನ ಚಲುವೆ ಯಾಕೆ
ದೂರ ಸರಿಯುವೆ?
ನೋಡು ಆ ಚಂದಿರನ
ಮೇಲೆಲ್ಲಾ ಕಲೆಯಿದೆ
ಆದರೆ ನನ್ನರಸಿಯ ಮುಖದ
ತುಂಬಾ ಕಳೆಯಿದೆ.
ತೇಲುವನಾತ ನೀಲಿ
ಅಂಬರದಲ್ಲಿ
ನೀನಿರುವೆ ಎನ್ನ
ಹೃದಯ ಮಂದಿರದಲ್ಲಿ.
ಎಂದಾದರೊಮ್ಮೆ ಆಗುವನಾತ ಕಡುನೀಲಿ
ನೀನ್ಯಾವಾಗಲೂ ತೇಲುವೆ ಎನ್ನ ಪ್ರೀತಿಯ ಸಾಗರದಲಿ.
ನಸು ನಾಚಿ ಕೆಂಪಾಗಿ
ನಾನೂ ಪಿಸುಗುಟ್ಟಿದೆ..
ಇನಿಯಾ..ಆ ಚಂದಿರನ ಕಾಂತಿಗೆ
ಸೂರ್ಯ ಕಾರಣ
ನನ್ನ ಕಂಗಳ ಕಾಂತಿಗೆ
ನೀನೆ ಭೂಷಣ.
ಚಂದಾ / ಸವಿತಾ ಇನಾಮದಾರ್.