Followers

Friday, 11 August 2017

ಕನ್ನಡಾಂಬೆಯ ಕಣ್ಣೀರು



ಹಲಬುತಿಹಳು ಕನ್ನಡಾಂಬೆ..
ತನ್ನ ಮಕ್ಕಳ ಹುಚ್ಚು ಕಚ್ಚಾಟವ ನೋಡಿ
ಗಡಗಡನೆ ನಡುತಿಹಳು
ಮುಂಬರುವ ವಿನಾಶದ ಮುನ್ಸೂಚನೆಯ ಕಂಡು.

ಸಮರಸದ ಬದುಕಿನಲಿ ದ್ವೇಷದ ಹುಳಿಯ ಹಿಂಡಿ
ಒಡೆದು ಹೋದ ಒಗ್ಗಟ್ಟನ್ನು ನೋಡಿ
ಕುಹಕದಿ ನಲಿವ ದಾಂಢಿಗರ ಕೇಕೆಯನು ಕೇಳಿ
ಕೊರಗುತಿಹಳು ಕನ್ನಡಾಂಬೆ.

ಸಮಯ ಮಿಂಚುವುದಕೂ ಮುನ್ನ
ಎಚ್ಚತ್ತಿಕೊಳ್ಳಿ ಕಂದಮ್ಮಗಳೇ
ಎನ್ನ ಕರುಳ ಬಳ್ಳಿಯನು ಕತ್ತರಿಸದಿರಿ ಮಕ್ಕಳೇ
ಎಂದೆನ್ನುತ ಬಿಕ್ಕುತಿಹಳು ಕನ್ನಡಾಂಬೆ.

ವೀರ ಯೋಧರ ನಾಡಲ್ಲಿ
ಹೇಡಿಗಳ ಹಾವಳಿಯನು ತಡೆದು
ಭಾತೃತ್ವದ ಬೀಜವನ್ನು ಮತ್ತೆ ಬಿತ್ತಿರಿ
ಕನ್ನಡದ ಬಾವುಟವನು ಇನ್ನೂ ಮೇಲಕ್ಕೆತ್ತಿರಿ.

ಚಂದಾ / ಸವಿತಾ ಇನಾಮದಾರ್.









Thursday, 25 May 2017

ಅಂಬರ



ಪ್ರತಿ ಬಾರಿ  ಭವ್ಯ ಅಂಬರದಲ್ಲಿ
ಹೊಸ ಹೊಸ ರಂಗನ್ನುಕಾಣುವೆ
ಮೊದಲೆಂದೂ ನೋಡದ  ಮೇಘಗಳಲಿ
ನಾ ಮುಳುಗಿ ಹೋಗುವೆ.


ತನ್ನ ಬಾಹುಗಳಲಿ ಬಂದಿಸಲು ನನ್ನ
ಕಾಯುತಿಹನು ಪ್ರಿಯ ನಲ್ಲ
ಸ್ವರ್ಗ ಸುಖದ ನರ್ತನದಲಿ
ಸವಿಜೇನುಣಿಸಲು ಬಲ್ಲ.

ನಗುವ ಮೋಡಗಳೊಂದಿಗೆ
ನಾ ಓಡಲು ಬಯಸುವೆ
ಮದ ಮತ್ಸರಗಳಿಂದ ದೂರ
ಮುಕ್ತ ಬಾನಲಿ ನಾ ತೇಲುವೆ.

ನಿನ್ನಲ್ಲೊಂದೇ ಬಿನ್ನಹ ಶಿವ
ಕೊಡೆನಗೆ ನಲ್ಲನ ಸಾಂಗತ್ಯ
ಕೊನೆಯುಸಿರಿನ ತನಕ
ಹಸಿರಾಗಿರಲಿ ನಮ್ಮ ದಾಂಪತ್ಯ.

ಚಂದಾ / ಸವಿತಾ ಇನಾಮದಾರ್.






Wednesday, 24 May 2017

The Sky





Every time I fly
                            I can see new colours in the sky
                            New designs that never repeat
                            Mesmerize me  by their lovely treat


                                                          I can see HIM waiting for me
                                                          Surrounded with cloudy cushions
                                                          Waving at me with his strong arms
                                                          Asking me to join for a heavenly dance.

                            Love to be with these running clouds
                            Far away from those unwanted bouts..
                            I pray God to give me one chance
                            Make me stay in the trance.
.
                                                                                               Chanda / Savita Inamdar.


Thursday, 20 April 2017

ಅರಳು ಮಲ್ಲಿಗೆ





ತೆರೆದ ಕಂಗಳಿಂದ ನಿನ್ನ
ದಾರಿಯನು ಕಾಯುತ್ತಾ ಕುಳಿತವಳಿಗೆ
ಕತ್ತಲಾದದ್ದೂ ಕಾಣದಾಯಿತಲ್ಲಾ.

ನನ್ನ ಬಾಡಿದ ಮೊಗವ ನೋಡಿ
ಅರಳಿದ ಮಲ್ಲಿಗೆಯೂ ಸಹ
ಕಂಪು ಬೀರುವುದ ಬಿಟ್ಟು ಸುಮ್ಮನೇ ಕೂತಿಯಲ್ಲಾ.

ಬೇಗ ಬಾ ನಲ್ಲಾ..
ಮುಡಿಸು ಮಲ್ಲಿಗೆಯ ಹೂವ
ನಿನ್ನ ಪ್ರೀತಿಯ ನಲ್ಲೆಗೆ.

ಚಂದಾ / ಸವಿತಾ ಇನಾಮದಾರ್.



Sunday, 16 April 2017

ಎಲ್ಲಿರುವೆ ನಲ್ಲಾ ?




ಎಲ್ಲಿರುವೆ ನಲ್ಲಾ ?
ಸೂರ್ಯೋದಯಕ್ಕೂ ಮೊದಲು
ನಾ ಕರೆಮಾಡಿದ್ದೆನಲ್ಲಾ
ಸೂರ್ಯಾಸ್ತವಾಗುತಿದೆ ಇನ್ನೂ
ನಿನ್ನ ಕರೆ ಬರಲಿಲ್ಲಾ.. 

ಕಾಯುವ ನಲ್ಲೆಯ ಬಗ್ಗೆ
ನಿನಗೆ ಕಾಳಜಿ ಇಲ್ಲವೇ?
ಹಗಲೂ ಇರುಳೂ ಕೇವಲ
ನಿನ್ನ ಕಾಯಕವೇ ಮುಖ್ಯವೇ?

ಒಂದೇ ನಲುಮೆಯ ಮಾತು
ಅರಳಿಸುವುದೆನ್ನ ಮನ
ಮತ್ತೆ ಬರೆಯುವಂತೆ ಮಾಡಬೇಡ
ಇಂತಹ ವಿರಹದ ಕವನ. 

ಚಂದಾ/ಸವಿತಾ ಇನಾಮದಾರ್

Saturday, 8 April 2017

Cockoo..








U made my day
Waited to hear your voice
More romantic than my poems
Laced with honey…
Cannot buy from money.
You sing for your happiness
Never tried to impress others
Many have tried to copy U
But god has given copy right only to U. 

Chanda / Savita Inamdar.

Monday, 27 March 2017

ಪ್ರೇಮಾಮೃತ



ಕಾಷ್ಟವೆಂದೆಸೆದಿದ್ದ ಬಳ್ಳಿಯಲ್ಲಿಂದು
ಕಂಡಿತೊಂದು ಹೊಸ ಚಿಗುರು
ಪ್ರೀತಿಯ ಸಿಂಚನದಿ
ನಳನಳಿಸಿತು ಹೊಸ ಹಸಿರು

ಇದುವೇ ಸಾಕ್ಷಿ ನಮ್ಮ ಪುನರ್ಮಿಲನಕೆ
ನಿನ್ನ ನಲ್ಲೆಯಾಗುವೆನು ಏಳೇಳು ಜನ್ಮಕೆ

ಹೊಸ ವರ್ಷದ ಆಗಮನದ ಶುಭ ಸಂಕೇತವಿದು
ನಮ್ಮ ಜೀವನದ ಮಧುರ ಪ್ರೇಮಾಮೃತವಿದು.

ಚಂದಾ / ಸವಿತಾ ಇನಾಮದಾರ್.