Followers

Thursday, 25 May 2017

ಅಂಬರ



ಪ್ರತಿ ಬಾರಿ  ಭವ್ಯ ಅಂಬರದಲ್ಲಿ
ಹೊಸ ಹೊಸ ರಂಗನ್ನುಕಾಣುವೆ
ಮೊದಲೆಂದೂ ನೋಡದ  ಮೇಘಗಳಲಿ
ನಾ ಮುಳುಗಿ ಹೋಗುವೆ.


ತನ್ನ ಬಾಹುಗಳಲಿ ಬಂದಿಸಲು ನನ್ನ
ಕಾಯುತಿಹನು ಪ್ರಿಯ ನಲ್ಲ
ಸ್ವರ್ಗ ಸುಖದ ನರ್ತನದಲಿ
ಸವಿಜೇನುಣಿಸಲು ಬಲ್ಲ.

ನಗುವ ಮೋಡಗಳೊಂದಿಗೆ
ನಾ ಓಡಲು ಬಯಸುವೆ
ಮದ ಮತ್ಸರಗಳಿಂದ ದೂರ
ಮುಕ್ತ ಬಾನಲಿ ನಾ ತೇಲುವೆ.

ನಿನ್ನಲ್ಲೊಂದೇ ಬಿನ್ನಹ ಶಿವ
ಕೊಡೆನಗೆ ನಲ್ಲನ ಸಾಂಗತ್ಯ
ಕೊನೆಯುಸಿರಿನ ತನಕ
ಹಸಿರಾಗಿರಲಿ ನಮ್ಮ ದಾಂಪತ್ಯ.

ಚಂದಾ / ಸವಿತಾ ಇನಾಮದಾರ್.






No comments:

Post a Comment