ಎಲ್ಲಿರುವೆ ನಲ್ಲಾ ?
ಎಲ್ಲಿರುವೆ ನಲ್ಲಾ
?
ಸೂರ್ಯೋದಯಕ್ಕೂ ಮೊದಲು
ನಾ ಕರೆಮಾಡಿದ್ದೆನಲ್ಲಾ
ಸೂರ್ಯಾಸ್ತವಾಗುತಿದೆ
ಇನ್ನೂ
ನಿನ್ನ ಕರೆ ಬರಲಿಲ್ಲಾ..
ಕಾಯುವ ನಲ್ಲೆಯ ಬಗ್ಗೆ
ನಿನಗೆ ಕಾಳಜಿ ಇಲ್ಲವೇ?
ಹಗಲೂ ಇರುಳೂ ಕೇವಲ
ನಿನ್ನ ಕಾಯಕವೇ ಮುಖ್ಯವೇ?
ಒಂದೇ ನಲುಮೆಯ ಮಾತು
ಅರಳಿಸುವುದೆನ್ನ ಮನ
ಮತ್ತೆ ಬರೆಯುವಂತೆ ಮಾಡಬೇಡ
ಇಂತಹ ವಿರಹದ ಕವನ.
ಚಂದಾ/ಸವಿತಾ ಇನಾಮದಾರ್
No comments:
Post a Comment