Followers

Friday 31 May 2013

ಬಿಳಿಯುಡಿಗೆಯ ಒಡತಿ…




ವ್ಹಾರೆ  ಬಿಳಿಯುಡಿಗೆಯ ಒಡತಿ
ಎಷ್ಟು ಬೇಗ ನೀನಾದೆ ನನ್ನಿನಿಯನ ಗೆಳತಿ ??
ಆತನ ಮನದಲ್ಲೂ ನೀನೇ
ಆತನ ಬಾಯಲ್ಲೂ ನೀನೇ !!

ನೀ ಬರುವಾಗ ಹರಡುವೆ ಆ ನಿನ್ನ ಪರಿಮಳ
ಯಾರ ಮುಂದೆ ಹೇಳಲಿ ಎನ್ನ ಮನದ ತಳಮಳ ??
ಬೆಳ್ಳಿಯ ಅರಮನೆಯಲ್ಲಿ ನೀ ವಾಸ ಮಾಡುವೆ,
ಆದರೂ ನೀ ಯಾಕೆ ನಿರಾಭರಣ ಕಾಣುವೆ???

ಮೀಯುತ್ತಿದ್ದ ಇನಿಯ ನನ್ನ ಮುಗ್ಧ ನಗೆಯ ಹೊಳೆಯಲ್ಲಿ
ಮುಳುಗಿ ಹೋಗಿರುವನೀಗ ನಿನ್ನ ಬಿಳಿಯ ಹೊಗೆಯಲ್ಲಿ.
ಸುಖ –ದುಃಖದಲ್ಲಿ ಮೊದಲು ಭಾಗಿಯಾಗುತ್ತಿದ್ದೆ ನಾನು
ನನಕೂ ಮುಂಚೆ ಇರುವೆಯೀಗ ಅವನ ಬಳಿಯಲ್ಲಿ ನೀನು .

ಕೆಲವೇ ದಿನಗಳವರೆಗೆ ನಡೆಯುವುದು ನಿಮ್ಮೀ ಚೆಲ್ಲಾಟ
ಡಾಕ್ಟರನ್ನು ಕಾಣ ಬೇಕಾದಾಗ ಆಗುವುದು ನೋಡು ಪರದಾಟ.
ಎಷ್ಟೆಷ್ಟೋ ವಿಧಗಳಿಂದ ಬಿನ್ನಹಿಸಿದ್ದೆ ನಿನ್ನ ಬಿಡಿರೆಂದು
ಪಶ್ಚಾತ್ತಾಪ ಪಡಹತ್ತಿಹರೀಗ ನಾನೇಕೆ ಆದೆ ಹೀಗಿದರ ದಾಸನೆಂದು????

ಚಂದಾ / ಸವಿತಾ ಇನಾಮದಾರ್.

11 comments:

  1. ನಿಜ ದಾಸನಾದಮೇಲೆ ಚಟಗಳಿಗೆ ಅವುಗಳದ್ದೇ ಕಾರುಬಾರು...ಒಳ್ಳೆಯ ಸಂದೇಶವಿರುವ ಕವನ..ಸವಿತಾ.

    ReplyDelete
    Replies
    1. ಹೃತ್ಪೂರ್ವಕ ಧನ್ಯವಾದಗಳು @ಜಲನಯನ ...ಚಟದ ಆಟಕ್ಕೆ ಸೋತರೆ ಹ್ಯಾಗೆ?? ಜೀವನದಲ್ಲಿ ಗೆಲ್ಲುವುದು ತುಂಬಾ ಇದೆ ..

      Delete
  2. ಚಾಟಗಳೇ ಹಾಗೆ ಒಮ್ಮೆ ಬೆನ್ನು ಬಿದ್ದರೆ ಅವು ಕಳಚಿಕೊಳ್ಳುವುದೇ ಇಲ್ಲ. ಧೂಮಪಾನಮ್ ವಹಾಮ್ಯಹಮ್ - ಧೂಮಪಾನಮ್ ಸರ್ವಸ್ವಮ್ ಅನ್ನುವಂತಾಗಿದೆ ನನ್ನ ಪರಿಸ್ಥಿತಿ. ಒಂದು ಸಾಮಾಜಿಕ ಜಾಗೃತಿಯ ಕವನವನ್ನು ಅದ್ಭುತವಾಗಿ ಬರೆದುಕೊಟ್ಟಿದ್ದೀರಾ.

    ReplyDelete
  3. ಹೃತ್ಪೂರ್ವಕ ಧನ್ಯವಾದಗಳು tammaa..
    ಈ ಧೂಮಪಾನ ಚಟದ ದಾಸನಾದರೆ
    ಚಟ್ಟ ಏರುವ ಸಮಯ ಬಲು ಬೇಗ ಬರುವುದು
    ಜೊತೆಗಿದ್ದವರನ್ನೂ ಕಬಳಿಸದೇ ಇರದು..
    ಅಲ್ವೇ ತಮ್ಮಾ Badarinath Palavalli ???
    ಜನ ಜಾಗೃತಿ ಮೂಡಲಿ, ಎಲ್ಲರೂ ಆರೋಗ್ಯದಿಂದಿರಲೆಂದು ಬರೆದಿರುವೆ ಈ ಕವನ.

    ReplyDelete
  4. ಹೃತ್ಪೂರ್ವಕ ಧನ್ಯವಾದಗಳು @ಜಲನಯನ ...ಚಟದ ಆಟಕ್ಕೆ ಸೋತರೆ ಹ್ಯಾಗೆ?? ಜೀವನದಲ್ಲಿ ಗೆಲ್ಲುವುದು ತುಂಬಾ ಇದೆ ..

    ReplyDelete
  5. ಒಳ್ಳೆಯ ಸಂದೇಶವಿರುವ ಕವನ..ಸವಿತಾ.


    ReplyDelete
    Replies
    1. ಧನ್ಯವಾದಗಳು ಶಾರದಾ ಅವರೆ.

      Delete
  6. ಸಿಗರೇಟಿಗೆ ಸವತಿಯ ಸ್ಥಾನಮಾನ ನೀಡಿರುವ ಕವಿತೆ ತುಂಬಾ ಚೆನ್ನಾಗಿದೆ... ಇಷ್ಟವಾಯ್ತು

    ReplyDelete
    Replies
    1. ಅಲ್ವೇ ಮತ್ತೆ?? ಸಿಗರೇಟೇನು ಸವತಿಗೂ ಕಮ್ಮಿಏನಲ್ಲ Pradeep Rao ji.. ಇದು ಅನುಭವಾಮೃತ ..ಹಹಹ.. ಇಷ್ಟವಾಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು..

      Delete
  7. ಧನ್ಯವಾದಗಳು Sharada M..

    ReplyDelete
  8. ಅಲ್ವೇ ಮತ್ತೆ?? ಸಿಗರೇಟೇನು ಸವತಿಗೂ ಕಮ್ಮಿಏನಲ್ಲ Pradeep Rao ji.. ಇದು ಅನುಭವಾಮೃತ ..ಹಹಹ.. ಇಷ್ಟವಾಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು..

    ReplyDelete