Followers

Monday 29 April 2013

ಓ ನನ್ನ ಒಲವೇ




ಓ ನನ್ನ ಒಲವೇ
ನೀ ಇನ್ನೂ ಎಲ್ಲಿ ಕುಳಿತಿರುವೆ ??
ಮುಂಜಾನೆಯಿಂದ  ನಿನ್ನ ಸನಿಹಕ್ಕಾಗಿ
ಪರಿತಪಿಸುತ್ತಾ  ನಾ ಕಾಯುತ್ತಿರುವೆ.
ನಿನ್ನಾಲಿಂಗನದಲ್ಲಿ ನನ್ನನ್ನೇ ನಾ ಮರೆಯುವೆ
ಬಾರೆಯಾ ನೀ ಬೇಗಾ ಯಾಕೆ ಹೀಗೆ ಕಾಡುವೆ??
ಬಿಡು ನಿನ್ನ ಈ ಮೊಂಡಾಟ  ಎನಗೆ ಹೊಸದೇನಲ್ಲಾ
ಹಾಗಾಗೇ ಆ ಬ್ರಹ್ಮ ನಮ್ಮಿಬ್ಬರ ಗಂಟು ಹಾಕಿರುವನಲ್ಲಾ.
ಚಂದಾ / ಸವಿತಾ  ಇನಾಮದಾರ್.

4 comments:

  1. ಪರಸ್ಪರತೆ, ವಿರಹ ಮತ್ತು ತುಸು ವಿರಸಗಳೇ ಒಲವಿನ ಸಾಕ್ಷಾತ್ಕಾರಕ್ಕೆ ಮೆಟ್ಟಿಲುಗಳು. ಇಲ್ಲಿನ ಕರೆಯು ಅಂತರಾಳದ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ. ಇಷ್ಟವಾಯಿತು.

    ReplyDelete
  2. ಧನ್ಯವಾದಗಳು ತಮ್ಮಾ @Badarinath Pavalli .. ಈ ಸುಮಧುರ ಜೀವನ ಸರಸ- ವಿರಸಗಳ ಸಂಗಮ ಅಲ್ವೇ?? ...

    ReplyDelete
  3. ತುಂಬಾ ಚೆನ್ನಾಗಿದೆ ಮೆಡಮ್

    ReplyDelete
  4. ಧನ್ಯವಾದಗಳು @Yallappa Narasannavar ಅವರೆ.

    ReplyDelete