ಧರೆಯಿಂದ ನೀರು ಇಂಗಿ ಹೋಗಬಹುದೆ ?
ನೀ ಏಕೆ
ನನ್ನಿಂದ ದೂರವಾಗಿ ಹೋದೆ ?
ಈ ವಿರಹವ ತಾಳೆನು ಓ ಇನಿಯ ನೀ ಏಕೆ ಹೀಗಾದೆ ?
ನೀ ನೆಲೆತಿರುವೆ ಎನ್ನ ಮನದಾಳದಲಿ
ಎನ್ನ ಬಿಟ್ಟು ಎಲ್ಲಿ ಹೋದೆ ಹುಸಿ ಮುನಿಸಿನಲಿ ?
ಆತುರದಿ-ಕಾತುರದಿ ನಾ ಕಾಯುತ್ತಾ ಕುಳಿತಿರುವೆ
ನೀ ಬಂದೇ ಬರುವೆ ಎಂಬ ಭರವಸೆಯಲಿ ಬೇಯುತ್ತಿರುವೆ.
ನಿನ್ನ ಬಾಹು ಬಂಧನಕೆ ಕಾಯುತಿದೆನ್ನ ತನು ಮನ
ನಿನ್ನ ದರ್ಷನಕ್ಕಾಗಿ ಕಾಯುತಿವೆ ಎನ್ನ ನಯನ
ನೀ ಬಂದೇ ಬರುವೆಯೆಂಬ ಭರವಸೆಯಿದೆ ಎನಗೆ
‘ಪ್ರೇಮ ಸಿಂಚನದ’ ಧಾರೆ ಎರೆವೆ ನಮ್ಮ ಮಧುರ ಪ್ರೀತಿಗೆ.
ಚಂದಾ
/ ಸವಿತಾ ಇನಾಮದಾರ್.
ಒಳ್ಳೆಯ ಭಾವ ಸಿಂಚನ.
ReplyDeletegood one..keep it up
ReplyDeleteಧನ್ಯವಾದಗಳು ಪುಷ್ಪರಾಜ್..
ReplyDeleteThank you Umesh ji..
ReplyDeleteಸುಮಧುರ ಭಾವನೆ ..
ReplyDeleteಮನದ ಪ್ರಶ್ನೆಗಳಿಗೆ ಮತ್ತು ಪ್ರೀತಿಯ ಉತ್ತರಗಳಿಗೆ ಕೊನೆಯೇ ಇಲ್ಲಾ.. :)
ಧನ್ಯ್ವಾದಗಳು ಪ್ರಶಾಂತ್ ಜಿ.. ಮನದ ಪ್ರಸ್ನೆಗಳಿಗೆ ಹಾಗೂ ಪ್ರೀತಿಯ ಉತ್ತರಗಳಿಗೆ ಕೊನೆಯಾದರೆ ಜೀವನದ ರಂಗು ಹೋಗುವುದಲ್ಲವೆ??
ReplyDelete