ನಗೆಯು ಬರುತಿದೆ
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ…
ಥಟ್ಟನೇ ಬದಲಾದ ಮನುಜನ ಮನವ ಕಂಡು
ನಗೆಯು ಬರುತಿದೆ…
ಸುರೆಯ ಮತ್ತಿನಲ್ಲಿ ಅಲೆಯುತ್ತಿದ್ದವನ ಕೈಯಲ್ಲಿ
ರುದ್ರಾಕ್ಷಿಯ ಸರವ ಕಂಡು ನಗೆಯು ಬರುತಿದೆ..
ಸ್ವೇತ ವಸ್ತ್ರವ ಧರಿಸಿ, ಕಾಮ – ಕ್ರೋಧವ ತ್ಯಜಿಸದೇ
ಇತರರನ್ನು ವಂಚಿಸುವುದ ಕಂಡು ನಗೆಯು ಬರುತಿದೆ..
ದೇವರೆಂದರೆ ದೂರ ಹಾಯುತ್ತಿದ್ದವ ಈಶನ
ಮೋಹಪಾಷದಲ್ಲಿ ಸಿಲುಕಿದಂತೆ ನಟಿಸುವುದನು ಕಂಡು
ನಗೆಯು ಬರುತಿದೆ…
ಇಂತಹ ಗೋಮುಖ ವ್ಯಾಘ್ರರ ಸಂಗ ಬಯಸುವ
ಮೂಢ ಜನರನು ಕಂಡು ಎನ್ನ ಮನ ಮೌನವಾಗಿ ರೋದಿಸುತ್ತಿದೆ....
ಮೂಢ ಜನರನು ಕಂಡು ಎನ್ನ ಮನ ಮೌನವಾಗಿ ರೋದಿಸುತ್ತಿದೆ....
ಚಂದಾ / ಸವಿತಾ ಇನಾಮದಾರ್.
No comments:
Post a Comment