Followers

Saturday, 21 July 2012

ಸಿಂಚನ ಪ್ರೇಮ ಸಿಂಚನ..



                                                 ಸಿಂಚನ ಪ್ರೇಮ ಸಿಂಚನ..

ಪಾಳು ದೇಗುಲದಂತೆ ಕಂಗಳು
ಕಾದ ಮರಭೂಮಿಯಂತೆ ಮುಖಗಳು                 
ಪ್ರಿಯತಮನ ಪ್ರೇಮ ಸಿಂಚನಕ್ಕಾಗಿ ಕಾಯ್ದಂತೆ
ಕಾಯುತಿದೆ ಈ ಭೂಮಿ ಮುತ್ತಿನ ಹನಿಗಳಿಗಾಗಿ.

ಬಿರುಕು ಬಿಟ್ಟ ಭುವಿಯಲ್ಲಿ ಹಸಿರು ಕಾಣುವುದೆಂತು?
ಉಸಿರಾಡಲೂ ಕಠಿಣ ಈ ಉರಿಬಿಸಿಲ ತಾಪದಲಿ
ನಿನ್ನ ಹೆಸರೊಂದನ್ನು ಬಿಟ್ಟು ಬೇರೇನೂ ತೋಚದು ದೇವಾ
ಇನ್ನಾದರೂ ತೋರಿಸೆಯಾ ನಮ್ಮ ಮೇಲೆ ಕರುಣೆಯಾ?

ವರುಣನಾಗಮನಕ್ಕೆ ಕಾತರದಿ ಕಾಯುತ್ತಾ
ಕಣ್ಣು ಪಿಳುಕಿಸದೆಯೇ ಆ ಬಾನನ್ನು ನೋಡುತ್ತಾ
ತಪಿಸುತ್ತಲಿರುವೆವು, ಜಪಿಸುತ್ತಲಿರುವೆವು
ಇನ್ನಾದರೂ ಹೇ ದೇವಾ ತೋರಿಸೆಯಾ ಕರುಣೆಯಾ?

ಮುತ್ತಿನ ಹನಿ ಬಿದ್ದೊಡನೆ ಬಿರುಕು ಮುಚ್ಚಿ ಮೊಳಕೆ ಒಡೆದು
ಪ್ರೀತಿಯ ‘ ತರು’ ನಸು ನಗುತ ಯನ್ನ ಬಳಿ ಬಾ ಎಂದಿತು.
ಹಸಿರು ಸೀರೆಯುಟ್ಟ ಭೂದೇವಿ ಮಂದಹಾಸವ ಬೀರುತ್ತ
ಮುತ್ತನ್ನಿತ್ತ ಬಾನಿಗೆ  ಮತ್ತೆ ಮತ್ತೆ ಕೊಡುತ್ತಿರು ಎಂದಳು….

                                                    ಚಂದಾ/ ಸವಿತಾ ಇನಾಮದಾರ್                                                .

2 comments:

  1. ಮೇಡಮ್ ನಿಮ್ಮದು ಬ್ಲಾಗು ಅದ ಅಂತ ಗೊತ್ತಿರಲಿಲ್ಲ ಓದಿದೆ..
    ಛಲೋ ಅನಿಸ್ತು ..

    ReplyDelete
  2. ಧನ್ಯವಾದಗಳು ಉಮೇಶ್ ಜಿ... ಕವನ ಛೊಲೋ ಅನಿಸ್ತ್ಯಲ್ಲಾ...ಹೆಣ್ಣಿನ ಜೀವನದಲ್ಲಿ ತಾಯ್ತನದ ಸಂತಸಕ್ಕಿಂತ ದೊಡ್ಡ ಸಂತೋಷ ಯಾವುದು ... ಅಲ್ಲಾ??

    ReplyDelete