ಇನ್ನು ದೂರವಿಲ್ಲ..
ಓ ನನ್ನ ಪ್ರೀತಿಯ ನಲ್ಲಾ
ಇಂದೇಕೋ ಎನಗೆ ಕೆಲಸದಲ್ಲಿ ಮನಸೇ ಇಲ್ಲ
ನಿನ್ನ ನೆನಪು ಬಲು ಕಾಡುತಿದೆ
ಓಡೋಡಿ ನಿನ್ನ ಸೇರಬೇಕೆನಿಸುತಿದೆ
ಬರಲೇ ನಾ ಅಲ್ಲಿ ಹಾರಿ..
ದೂರವಿಲ್ಲ ಇನ್ನು ನಮ್ಮ ದಾರಿ.
ಅಪರಂಜಿಯಂಥಾ
ನಮ್ಮ ಪ್ರೀತಿಯ ಕಂಡು
ಆ ಮಹಾದೇವನೇ
ಒಲಿದಿರುವನು
ಪ್ರತಿ
ಕ್ಷಣವೂ ನಿನ್ನನ್ನೇ ನೆನೆಯುವಂತೆ ಮಾಡಿಹನು.
ನಮ್ಮ
ಪ್ರೇಮದಲ್ಲಿ ಅಡಗಿದೆ ಭರವಸೆಯ ಶಕ್ತಿ
ಕಳೆದು
ಹೋದ ಪ್ರೀತಿ ಮರಳಿ ಪಡೆದಾಗ
ಹೆಚ್ಚುವುದು
ಆ ಪರಶಿವನಲ್ಲಿ ಭಕ್ತಿ.
ಸವಿತಾ
ಇನಾಮದಾರ್.
No comments:
Post a Comment