ಹೆಸರಿನಲ್ಲೇನಿದೆ ?
ಎಲ್ಲವೂ ಹೆಸರಿನಲ್ಲೇ ಸಿಲುಕಿದೆ
ಹೆಸರಿನ ಪ್ರತಿ ಅಕ್ಷರದಲ್ಲೂ ಹೊಸತನ ಅಡಗಿದೆ.
ಎನ್ನಮ್ಮನಿಟ್ಟ ಪ್ರೀತಿಯ ಹೆಸರನು
ಅತ್ಯಮ್ಮ ಬದಲಾಯಿಸಿದಳು
ಹಿರಿಯರ ಇಷ್ಟವನರಿತು ಸುಮ್ಮನೇ
ಹೂಂಗುಟ್ಟು ಎಂದಿದ್ದಳು.
ಬದಲಾಯಿಸುವುದಕ್ಕೂ ಮುನ್ನ ಕೇಳಿದ್ದರೆನ್ನ
ಬದಲಾಯಿಸಲೇ ನಿನ್ನ ಪ್ರೀತಿಯ ಹೆಸರನ್ನ?
ಎನ್ನೊಪ್ಪಿಗೆ ಸಿಕ್ಕ ಮೇಲೆ ಬದಲಾಗಿತ್ತು
ಕುರುಹು..
ಅಡಗಿತ್ತು ನಾ ಹುಟ್ಟಿದಾಗ ಹಾರಿಸಿದ್ದ
ತುಪಾಕಿಗಳ ಸ್ವರವು.
ಎರಡು ದಶಕಗಳಾದರೂ ಅನಿಸದಿದು ಎನ್ನದೇ
ಹೆಸರೆಂದು
ಆ ಹೆಸರಿನಲ್ಲೇ ಎನ್ನುಸಿರು ಸಿಲುಕಿದೆ
ಇಂದು.
ಆದರೂ ಎನ್ನ ಅಸ್ಥಿತ್ವವನು ಮರೆಯಲು
ಬಿಟ್ಟಿಲ್ಲ ನನ್ನ ಪ್ರೀತಿಯ ನಲ್ಲ .
ಅದೇ ಚಂದದ ಹೆಸರನ್ನುಮಧುರವಾಗಿ
ಸದಾ ಹೃದಯಾಳದಿಂದ ಕರೆಯುವನಲ್ಲ.
ಚಂದಾ / ಸವಿತಾ ಇನಾಮದಾರ್.
No comments:
Post a Comment