ಕಾರ್ತಿಕ ಮಾಸದಲಿ ಹುಣ್ಣಿಮೆಯ ದೀಪದೊಡನೆ
ನಿನ್ನ ಪ್ರೀತಿಯ ಹೊಳಪು
ಎನ್ನ ಕಣ್ಣುಗಳಲಿ ಬೆಳಗಿದೆ..
ಮುತ್ತುಗಳ ಸುರಿಮಳೆಯಲ್ಲಿ ವಿರಹದಿ ಬಾಡಿದ ಮೊಗವು
ರಾಗ ರಂಜಿತವಾಗಿ ಮತ್ತೆ ಮುತ್ತು ಬೇಕೆನುತಿದೆ.
ಜನುಮಜನುಮದ ನಮ್ಮೀ ಮಧುರ ಬಂಧನವು
ಮಾಂಗಲ್ಯದ ಭಾಗ್ಯದಿಂದ ಮತ್ತೆ ಪವಿತ್ರವಾಗಿದೆ.
ಪ್ರತಿಕ್ಷಣವೂ ನಿನ್ನುಸಿರ ಹಸಿರೆನ್ನ ಪಾಲಿಗೆ ನೀಡೆಂದು
ಆ ಮಮತಾಮಯಿ ಮಾತೆಗೆ ನಾ ಬೇಡುತ್ತಿರುವೆ.
ಆ ಮಮತಾಮಯಿ ಮಾತೆಗೆ ನಾ ಬೇಡುತ್ತಿರುವೆ.
ಸವಿತಾ ಇಮಾದಾರ್…
No comments:
Post a Comment