ನಿನ್ನ ಕಾಣಲು ತಾಯೇ
ಕನಸುಗಳ ನಾಕಂಡೆ
ನೀ ಮನಸು ಮಾಡಿದೊಡೆ
ನಾ ನೋಡಿ ಬಂದೆ,
ನಿನ್ನ ಬಳಿ ಬಂದ.
ಕಂಡಿದ್ದೆ ನಾನಿನ್ನ
ದಿವ್ಯ ರೂಪ
ಹಚ್ಚಿದ್ದೆ ಅಲ್ಲೊಂದು
ಭಕುತಿಯಾ ದೀಪಾ.
ತಾಯೇ ನಮ್ಮೆಡೆಗೂ
ಸದಾ ಪ್ರೇಮದಿಂದಲಿ ನೋಡು.
ಮಾತೆ ದರುಷನ ಭಾಗ್ಯ
ಎಲ್ಲರಿಗೂ ನೀ ನೀಡು.
ಎಲ್ಲವನೂ ಕೊಟ್ಟಿರುವೆ
ಏನು ಬೇಡಲಿ ಇನ್ನು??
ಜಗವನ್ನೇ ಬಿಟ್ಟಿರುವೆ
ಏಕೆ ಕಾಡಲಿ ನಾನು??
ಚಂದಾ
/ ಸವಿತಾ ಇನಾಮದಾರ್.
ದೇವರ ದರ್ಶನಕೆ ಕಾದ ಭಕ್ತಳು, ದೇವರ ದರುಶನವಾದಾಗ ಅಮಿತಾನಂದವನು ಹೊಂದಿ ಭಕ್ತಯ ಪಾರವಶ್ಯದಲ್ಲಿ ಬೇಡಿಕೊಂಡಂತಿದೆ.
ReplyDeleteನೀನು ಹೇಳಿದ್ದು ಸತ್ಯ ತಮ್ಮ.. ನಾನು ಅದೆಷ್ಟೋ ವರ್ಷಗಳಿಂದ ಮಾ ವೈಷ್ಣವಿಯನ್ನು ಕಾಣುವ ಹಂಬಲ ಹೊಂದಿದ್ದೆ. ಅದು ಪೂರ್ಣಗೋಂಡಾಗ ನನಗರಿಯದೇ ಕಂಗಳು ತುಂಬಿ ಬಂದಿದ್ದವು..ಧನ್ಯತೆಯ ಭಾವದಲ್ಲಿ ಆ ದೇವಸ್ಥಾನದ ಪರಿಸರದಲ್ಲೇ ರಿಸೀತಿನ ಹಿಂಭಾಗದಲ್ಲಿ ಬರೆದ ನಾಲ್ಕು ಸಾಲುಗಳಿವು. ಇನ್ನೇನು ಬೇಡಲಿ ಈ ತಾಯಿಗೆ ?? ನನ್ನ ಮನದಿಂಗಿತವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯ ತಮ್ಮ.. ಧನ್ಯವಾದಗಳು.
ReplyDelete