Followers

Thursday, 8 May 2014

ಆರ್ಭಟ




 ಗುಡುಗು ಸಿಡಿಲಿನ ಆರ್ಭಟದೊಡನೆ
ಚರಂಡಿಯಲ್ಲಿ ಕೊಚ್ಚಿಹೋಗುತ್ತಿದ್ದ
ಸಾವಿರಾರು ಮುಗ್ಧರ ಹೋಂಗನಸುಗಳ ರಾಶಿಯ ಕಂಡೆ
ವಾಸ್ತವದೆಡೆಗೆ ತಿರುದಾಗ ನೆನಪಾಯ್ತು
ಇದು ದೇಶದ ರಾಜಧಾನಿಯೆಂದು.
ಇಲ್ಲಿ ದಿನವೂ ದಿಗಿಲುಗೊಳಿಸುವ ಹೊಸ
ಆರ್ಭಟಗಳು ಕೇಳಿಬರುತ್ತವೆಯಲ್ಲವೇ
ಆಶ್ವಾಸನೆಗಳ ಸುಳಿಯಲ್ಲಿ  ಸಿಲುಕಿ  ಬಳಲದವರು
ಇಲ್ಲಿ ಯಾರೂ  ಉಳಿದೇ ಇಲ್ಲವೇ??

ಚಂದಾ / ಸವಿತಾ ಇನಾಮದಾರ್

12 comments:

  1. Nimma taana tumba sundaravagide. Kavanadalli aardrate, asahaayakate ide.. Jotege ondu sandeshavu iddare chennaagiruttittu.....Shubhavagali.... :)

    Ananth

    ReplyDelete
    Replies
    1. ತಮ್ಮ ಮೆಚ್ಚಿಕೆಯ ಮಾತಿಗೆ ಧನ್ಯವಾದಗಳು ಅನಂತ್ ರಾಜ್ ಜಿ.

      Delete
  2. ದೆಹಲಿಯ ದುಗುಡು-ದುಮ್ಮಾನಗಳನ್ನು ಕಡಿಮೆ ಪದಗಳಲ್ಲಿ ಕಟ್ಟಿ ಕೊಟ್ಟ ನಿಮ್ಮ ಕಿರುಗವಿತೆ ಅರ್ಥಪೂರ್ಣವಾಗಿದೆ. ನಿಮ್ಮ ಕವಿತೆಗಳು ಸಂಕಲನದ ರೂಪದಲ್ಲಿ ಆದಷ್ಟು ಬೇಗನೆ ಹೊರ ಬರಲಿ.

    ReplyDelete
    Replies
    1. ಧನ್ಯವಾದಗಳು. ನನ್ನ ಕವಿತೆಗಳ ಸಂಕಲನದ ಬಿಡುಗಡೆಗಾಗಿ ಹಾರೈಸಿದ್ದಕ್ಕೆ ತುಂಬಾ ಧನುಅವಾದಗಳು. ಆದಷ್ಟು ಬೇಗನೇ ಪ್ರಕಟಿಸಲು ಪ್ರಯತ್ನಿಸುವೆ.

      Delete
  3. This comment has been removed by the author.

    ReplyDelete
  4. ದೆಹಲಿ ಹವಾಮಾನ ಗುಣದ ವಿಚಾರದಲ್ಲಿ ಅತಿರೇಕವನ್ನು ತೋರುವ ತಾಣ. ಅಲ್ಲಿನ ಋತುಮಾನಗಳೆಲ್ಲ ಹೊರಗಿನವರು ತಡೆದುಕೊಳ್ಳಲು ಆಗದಷ್ಟು ತುಸು ಹೆಚ್ಚೇ!

    ಅಂತೆಯೇ, ಇತಿಹಾಸದಿಂದ ಇಂದಿನವರೆಗೂ ರಾಜಕೀಯ ಅತಿರೇಕಗಳಿಗೆ ತಾನು ಮೂಕ ಸಾಕ್ಚಿಯಾಗಿದೆ.

    ಮಳೆ ಇಲ್ಲಿ ನೆಪವಾಗಿಟ್ಟು,
    ಕೆಲವೇ ಸಾಲುಗಳಲ್ಲಿ ವಾಸ್ತವ ತೆರೆದಿಟ್ಟಿದ್ದೀರ.

    ReplyDelete
    Replies
    1. ಧನ್ಯವಾದಗಳು ತಮ್ಮ. ಹೌದು..ಇಪ್ಪತೈದು ವರ್ಷಗಳಿಂದ ಇಲ್ಲೇ ನೆನೆಸಿರುವ ಕಾರಣ ದೆಹಲಿಯ ಹವಾಮಾನದ ಬದಲಾವಣೆಗಳು ನನಗೆ ಚೆನ್ನಾಗಿ ಚಿರಪರಿಚಿತವಾಗಿಬಿಟ್ಟಿವೆ. ಅತಿರೇಕವೆನಿಸಿದರೂ ಅನಭವಿಸಲೇ ಬೇಕು ತಮ್ಮ.

      Delete
  5. Replies
    1. ಧನ್ಯವಾದಗಳು ಪ್ರದೀಪ್ ರಾವ್.

      Delete