2007 ರ ‘ ಚಂಪಾ
ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ’ ನ ಬಹುಮಾನಿತ ಕವನ.
ವ್ಹಾರೇ
ದಿಲ್ಲಿಯ ಬೆಡಗಿ...
ವ್ಹಾರೇ ದಿಲ್ಲಿಯ
ಬೆಡಗಿ
ಎಷ್ಟಾರ ಛಂದೈತಿ
ನಿನ್ನ ಜಂಬದ ನಡಗಿ.
ಹಚ್ಚಿದಿ ಭಾರೀ ಖಮ್ಮಗಿನ
ಅತ್ತರಾ
ಆದ್ರ ನೀ ಇದ್ದೀ
ನನಕೂ ನಾಕಿಂಚು ಎತ್ತರಾ.
ಗುಳಿಗಲ್ಲದ ಈ ನಿನ್ನ
ನಗುವಿನ ಮೋಡಿ
ಅದನೋಡಿ ಬಿದ್ದೀನಲ್ಲ
ಆಳಕ ನಾ ಧಡ್ಡ ಖೋಡಿ.
ಬಣ್ಣಬಳಿದ ತುಟಿಗಳಿಂದ
ಇಣಿಕ್ಯಾವ ನಿನ್ನ ಬಿಳಿ ದಂತ ಪಕ್ತಿ
ಅದರ ಪರಿಣಾಮ ಈಗೀಗ ನಂಗ ಕಾಣಾಕ ಹತೈತಿ.
ಪಾಪ್ ಕಾರ್ನು. ಪಿಜ್ಜಾ,
ಪಿ.ವಿ.ರ್ ಮತ್ತ ಪಬ್ ನಂಥಾ ‘ಪ’ ಕಾರ
ಒಂದ ದಿನಕ ಖಾಲೀ
ಮಾಡ್ಯಾವಲ್ಲ ನನ್ನ ತಿಂಗಳ ‘ಪ’ಗಾರ.
ಛೇ..ಛೇ. .ನಿನಕೂ
ನಮ್ಮೂರ ಗಂಗೀನ ಪಾಡೇಳು,
ಕೊಟ್ಟ ರೊಕ್ಕಾ ಕರಗಿಸದನ
ಗಂಟು ಕಟ್ಟಿ ಮಡಗುವಳು.
ಚಂದಾ / ಸವಿತಾ ಇನಾಮದಾರ್.
No comments:
Post a Comment