Followers

Tuesday 6 August 2013

ಮುಗ್ಧತೆ..




ಪಕ್ಕದ ಮನೆಗೆ ಹೊಸದಾಗಿ ಬಂದ
ಚೆಲುವೆಯ ಚಂಚಲ ಕುಡಿನೋಟದ
ಒಂದೇ ಒಂದು ಝಲಕನ್ನು ಕಾಣಲು
ಹಾತೊರೆದು, ಕಾತುರತೆಯಿಂದ
ಕಿಟಕಿಯೆಡೆಗೆ ಓಡಿ ಹೋದಾಗ,
ನನಗಾಗಿ ಬಾಗಿಲ ಬಳಿ ಕಾಯುತ್ತ ನಿಂತಿದ್ದ
ನಮ್ಮಾವನ ಮಗಳ
ಮುಗ್ಧ ನೋಟವ ಎದುರಿಸದೆ
ತಲೆಬಾಗಿಸಿದೆ.

ಚಂದಾ / ಸವಿತಾ ಇನಾಮದಾರ್.

2 comments:

  1. ಮನದಂಗಳದ ಮಲ್ಲಿಗೆಯನು ಗಮನಿಸದೆ
    ಚಪ್ಪರವೇ ಇಲ್ಲದೆಡೆ ಮಲ್ಲಿಗೆಯ ಹಂಬಲಿಸಿದಂತೆ

    ReplyDelete
  2. ಆಹಾ..ತುಂಬಾ ಚೆನ್ನಾಗಿ ಹೇಳಿದೆ ತಮ್ಮಾ Badarinath Palavalli....ಧನ್ಯವಾದಗಳು ..ಹಿತ್ತಲ ಗಿಡ ಮದ್ದಲ್ಲಂತೆ, ಘರ್ ಕೀ ಮುರಗೀ ದಾಲ್ ಬರಾ ಬರ್ ಅಂತೆ.. ಯಾವಾಗ ಬುಧ್ಧಿ ಭೇಟಿಯಾಗುತ್ತೋ ಆಗ ಗಾಡಿ ಲೈನಿಗೆ ಬರುತ್ತಂತೆ.... .....

    ReplyDelete