ಹಳ್ಳಿಯಿಂದ ದಿಲ್ಲಿಗೆ
ಬಂದರೂ
ತಾಯ ಮಡಿಲನು ಹ್ಯಾಗೆ ಮರೆಯಲಿ ??
ಅಲ್ಲಿನ ಮಣ್ಣಿನ ಮಧುರ ಘಮಲಿಗೆ
ಇಲ್ಲಿನ ಮಾಲಿನ್ಯವ ಹ್ಯಾಗೆ ಹೋಲಿಸಲಿ??
ತಾಯ ಮಡಿಲನು ಹ್ಯಾಗೆ ಮರೆಯಲಿ ??
ಅಲ್ಲಿನ ಮಣ್ಣಿನ ಮಧುರ ಘಮಲಿಗೆ
ಇಲ್ಲಿನ ಮಾಲಿನ್ಯವ ಹ್ಯಾಗೆ ಹೋಲಿಸಲಿ??
ಹಚ್ಚ ಹಸಿರು ಎಲೆಗಳಲಿ
ಕಂಡೆ ನನ್ನ ಬಾಲ್ಯವ
ಹಣದ ಹೊಳೆ ಹರಿಸಿದರೂ
ಕಟ್ಟೆನದರ ಮೌಲ್ಯವ
ಕೈ ಬೀಸಿ ಕರೆಯುತಿಹವು
ಹಣ್ಣು – ಹೂವು, ಕಾಯಿ
ಕಾಯುತ್ತಾ ನಿಂತಿಹಳು
ನನ್ನ ಪ್ರೇಮಮಯಿ ತಾಯಿ.
ಅವಸರದಿ ಅಪ್ಪಾಜಿ
ಓಡೋಡಿ ಬರುವರು
ಮಗಳ ಮೊಗವ ನೋಡಿದೆಡೆ
ಬರಸೆಳೆದು ಅಪ್ಪುವರು.
ತಂದೆ- ತಾಯಂದಿರ
ಈ ಸುಮಧುರ ಬಾಧವ್ಯ
ಕೊನೆಯವರೆಗೆ ಇರುವುದು
ಚಿರ ನೂತನ – ಚಿರ ನವ್ಯ.
ಚಂದಾ / ಸವಿತಾ ಇನಾಮದಾರ್.
ಅಕ್ಕ, ಈ ನಿಮ್ಮ ಕವಿತೆಯ ಶ್ರೇಷ್ಟತೆ ಏನೆಂದರೆ, ಇಲ್ಲಿಯ ಡೆಲ್ಲಿಯನ್ನು ನಾವು ಬೆಂದಕಾಳೂರು ಎಂದು ಬದಲಿಸಿ ಓಡಿಕೊಂಡರೆ ಇದು ನಮ್ಮದೂ ಕವಿತೆ!
ReplyDeleteತುಂಬಾ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದೀರಾ ಅಕ್ಕ.
ಕವಿತೆಯನ್ನು ಮೆಚ್ಚಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ತಮ್ಮಾ@Badarinath Palavalli. ಹಹಹ..'ನಮ್ಮ ಮಣ್ಣಿನ ಘಮಲಿನ ಅಮಲೇ ಬೇರೆ..ಮತ್ತೆ ನೋಡು ನನ್ನ ಕವಿತೆ ನಿನ್ನದೂ ಕವಿತೆ... ಕಾರಣ ಇಬ್ಬರದೂ ಒಂದೇ ಕಥೆ...ಅಲ್ವೇ??
ReplyDelete