Followers

Thursday, 27 June 2013

ಗಂಡನ ಗೋಳ್ಯಾಟ…  ನನ್ನ ಪ್ರೀತಿಯ ಪಮ್ಮಿ…  
 ನನ್ನ  ಮಕ್ಕಳ ಮೆಚ್ಚಿನ  
ಗುಂಡು ಗುಂಡಗಿನ ಮಮ್ಮೀ..
ಇನ್ನಾರ ಮಾಡ ಸ್ವಲ್ಪ ನೀ
ತಿನಸೂದು - ತಿನ್ನೂದು ಕಮ್ಮಿ..
ಇಲ್ಲss ..ನೀ ಯಾರಿಗೂ ಇಲ್ಲಾ ಕಮ್ಮಿ,
ಆದ್ರ ನಿನ್ನss  ನೋಡಿ ನಾಚಲಿಕ್ಕೆ ಹತ್ತ್ಯಾವಲ್ಲ
ನಮ್ಮ ಧಾರವಾಡದ ಎಮ್ಮಿ..
ಏ ಪಮ್ಮೀ…ನಿಂದ್ರ..ನಿಂದ್ರು..
ಸ್ವಲ್ಪ ನನ್ನ ಮಾತು  ಕೇಳಿಲ್ಲೆ..
ಛೇ..ಛೇ.. ಬ್ಯಾಡ … ಬ್ಯಾಡಾ ರಾಣೀ..
ನಾ ಹೀಂಗಂತೀನಿ ಅಂತ
ಮಾರೀ ಸೊಟ್ಟ ಮಾಡ ಬ್ಯಾಡಾ
ಮತ್ತ ಜಿಮ್ಮಿಗೂ  ನೀ ಸೇರಕೋ ಬ್ಯಾಡಾ
ಅಲ್ಲಿಗೆ ಹೋಗಿ  ಎಷ್ಟ ಒದ್ದಾಡಿದ್ರೂನೂ ,
ಬೇಕಾದಷ್ಟು ರೊಕ್ಕಾ ಸುರುದ್ರೂನೂ ,
ನೀ ಆಗಂಗೇ ಇಲ್ಲಾ ಬಿಡು ‘ ಕಮ್ಮಿ.. ‘
ಆದ್ರೂ ಆದ್ರೂ..  ನೀನssss..  ನನ್ನ..
 ಪ್ರೀತಿಯ ಡುಮ್ಮ ಡುಮ್ಮಗಿನ .. ಪಮ್ಮಿ..
ನನ್ನ ಮುದ್ದಿನ ಮಕ್ಕಳ  ಪ್ರೀತಿಯ ಮಮ್ಮೀ…

ಚಂದಾ / ಸವಿತಾ ಇನಾಮದಾರ್.

3 comments:

 1. ತಿನ್ನುವುದು ಮೂಟೆ ಕರಗಿಸಲು ಮತ್ತೆ ಹೋಗಬೇಕೇ ಜಿಮ್ಮಿಗೆ?
  ಮೇಡಂ ಪಮ್ಮಿ ಸಣ್ಣಗಾಗಬೇಕು ನೀವು ಬೇಗನೆ! :-D

  ReplyDelete
 2. This comment has been removed by the author.

  ReplyDelete
 3. ಹಹಹಹ... ಈ ಬೊಜ್ಜು ಹೊಟ್ಟೆಯ ನಾರಿ ಯಾವಾಗ ಬಡವಳಾಗುವಳೋ ಗೊತ್ತಿಲ್ಲ ತಮ್ಮಾ.. ಕಮ್ಮಿ ತಿಂದರೂ ಕರಗದು.. ಜಿಮ್ಮಿಗೆ ಹೋದರೆ ಕರಗಬಹುದೆ??

  ReplyDelete