ವ್ಹಾರೆ ಬಿಳಿಯುಡಿಗೆಯ ಒಡತಿ
ಎಷ್ಟು ಬೇಗ ನೀನಾದೆ
ನನ್ನಿನಿಯನ ಗೆಳತಿ ??
ಆತನ ಮನದಲ್ಲೂ ನೀನೇ
ಆತನ ಬಾಯಲ್ಲೂ ನೀನೇ
!!
ನೀ ಬರುವಾಗ ಹರಡುವೆ
ಆ ನಿನ್ನ ಪರಿಮಳ
ಯಾರ ಮುಂದೆ ಹೇಳಲಿ
ಎನ್ನ ಮನದ ತಳಮಳ ??
ಬೆಳ್ಳಿಯ ಅರಮನೆಯಲ್ಲಿ
ನೀ ವಾಸ ಮಾಡುವೆ,
ಆದರೂ ನೀ ಯಾಕೆ ನಿರಾಭರಣ
ಕಾಣುವೆ???
ಮೀಯುತ್ತಿದ್ದ ಇನಿಯ
ನನ್ನ ಮುಗ್ಧ ನಗೆಯ ಹೊಳೆಯಲ್ಲಿ
ಮುಳುಗಿ ಹೋಗಿರುವನೀಗ
ನಿನ್ನ ಬಿಳಿಯ ಹೊಗೆಯಲ್ಲಿ.
ಸುಖ –ದುಃಖದಲ್ಲಿ
ಮೊದಲು ಭಾಗಿಯಾಗುತ್ತಿದ್ದೆ ನಾನು
ನನಕೂ ಮುಂಚೆ ಇರುವೆಯೀಗ
ಅವನ ಬಳಿಯಲ್ಲಿ ನೀನು .
ಕೆಲವೇ ದಿನಗಳವರೆಗೆ
ನಡೆಯುವುದು ನಿಮ್ಮೀ ಚೆಲ್ಲಾಟ
ಡಾಕ್ಟರನ್ನು ಕಾಣ
ಬೇಕಾದಾಗ ಆಗುವುದು ನೋಡು ಪರದಾಟ.
ಎಷ್ಟೆಷ್ಟೋ ವಿಧಗಳಿಂದ
ಬಿನ್ನಹಿಸಿದ್ದೆ ನಿನ್ನ ಬಿಡಿರೆಂದು
ಪಶ್ಚಾತ್ತಾಪ ಪಡಹತ್ತಿಹರೀಗ
ನಾನೇಕೆ ಆದೆ ಹೀಗಿದರ ದಾಸನೆಂದು????
ಚಂದಾ / ಸವಿತಾ ಇನಾಮದಾರ್.