Followers

Monday, 29 April 2013

ಚುನಾವಣಾ ಅಭ್ಯರ್ಥಿ-




ತನ್ನ ಮನೆಯಲ್ಲಿ ಮುಚ್ಚಿಡುವನು ಅನ್ನ
ಇತರರ ಮನೆಗೆ ಹಾಕುವನು ಕನ್ನ. 
ತಲೆಬಾಗಿ  ಹಲ್ಕಿರಿಯುವನು 
ಓಟು ಕೊಡುವವರೆಗೆ 
ಕುರ್ಚಿಯ ಮೇಲೆ ಕುಳಿತೊಡನೆ 
ಹುಡುಕಿದರೂ ಕಾಣನವನು ಕೆಳಗಿಳಿಯುವವರೆಗೆ.
ತನ್ನ ಗೇಣು ಹೊಟ್ಟೆಯ ನೆಪದಲ್ಲಿ
ಇತರರಿಗೆ ನೇಣು ಹಾಕುವನು ಈ ನಯವಂಚಕ
ಈ ಬಾರಿಯಾದರೂ ಎಚ್ಚರದಿ, ಒಮ್ಮತದಿ ಆರಿಸಿ ತನ್ನಿ
ಆಗಲಿ ಆತ ನಿಮ್ಮ 'ಹಿತಚಿಂತಕ'.

 ಚಂದಾ / ಸವಿತಾ ಇನಾಮದಾರ್

ಓ ನನ್ನ ಒಲವೇ




ಓ ನನ್ನ ಒಲವೇ
ನೀ ಇನ್ನೂ ಎಲ್ಲಿ ಕುಳಿತಿರುವೆ ??
ಮುಂಜಾನೆಯಿಂದ  ನಿನ್ನ ಸನಿಹಕ್ಕಾಗಿ
ಪರಿತಪಿಸುತ್ತಾ  ನಾ ಕಾಯುತ್ತಿರುವೆ.
ನಿನ್ನಾಲಿಂಗನದಲ್ಲಿ ನನ್ನನ್ನೇ ನಾ ಮರೆಯುವೆ
ಬಾರೆಯಾ ನೀ ಬೇಗಾ ಯಾಕೆ ಹೀಗೆ ಕಾಡುವೆ??
ಬಿಡು ನಿನ್ನ ಈ ಮೊಂಡಾಟ  ಎನಗೆ ಹೊಸದೇನಲ್ಲಾ
ಹಾಗಾಗೇ ಆ ಬ್ರಹ್ಮ ನಮ್ಮಿಬ್ಬರ ಗಂಟು ಹಾಕಿರುವನಲ್ಲಾ.
ಚಂದಾ / ಸವಿತಾ  ಇನಾಮದಾರ್.

Thursday, 11 April 2013

ಉಗಾದಿ



ಉಗಾದಿ
ಅನಾದಿ ಕಾಲದಿಂ ಬರುತಿಹುದು ಉಗಾದಿ
ಇದುವೇ  ನಮ್ಮ ಹೊಸ ವರ್ಷದ ಹೊಸತನದ ಬುನಾದಿ..
ಜೀವನದಲ್ಲಿ ಹೊಸ ಹಸಿರು ಚಿಗುರುವುದು,
ಬೇವು ಬೆಲ್ಲದೊಡನೆ  ಮಿಲನವಾಗುವುದು.

ವಿಜಯನಾಮ ಸಂವತ್ಸರದಲಿ
ಜಯದ  ಘೋಷ ಮೊಳಗಲಿ
ಅನುದಿನವೂ ನವೋಲ್ಲಾಸ  ಸಿಗಲಿ…  
ಎಲ್ಲೆಡೆಗೂ ಹರುಷದ ಹೊನಲು ಹರಿಯಲಿ..