Followers

Wednesday, 5 December 2012

ಕೂಪ ಮಂಡೂಕ



ಕೂಪ ಮಂಡೂಕ 

ಕೂಪ ಮಂಡೂಕಕ್ಕೆ ತಾನೇ ಶ್ರೇಷ್ಠನೆಂಬ ಅಹಮು
ಮಾಡದಿರಿ ಈ ಅಹಮೆಂಬ ಮಂಡೂಕದ ಗುಲಾಮಗಿರಿ
ಅದೆಷ್ಟೋ ಬಾರಿ ಕಾಲು ಜಗ್ಗಿದರೂ
ಬಿಡದೇ ಮರಳಿ ಪ್ರಯತ್ನವ ಮಾಡಿ
ಕೊನೆಗೊಮ್ಮೆ ಗುರಿಯ ತಲುಪಿದಾಗ
ನೋವು ಮರೆಯುವಿರಿ
ನಲುವಿನಿಂದ ಹಾರಾಡುವಿರಿ..

ಚಂದಾ / ಸವಿತಾ ಇನಾಮದಾರ್..

Wednesday, 7 November 2012

ನಿನ್ನ ನೋಡಿ…

ನಿನ್ನ ನೋಡಿ…  

ಆಸೆಯ ಅಲೆಗಳು ಮೀಟಿವೆ
ತಾಳೆಯನು ಈ ಚಡಪಡಿಕೆಯನು
ಸಿಗುತ್ತಿಲ್ಲ ಹೊಡೆಯಲೊಂದು ಕಲ್ಲು
ಹೊರಬರುತ್ತಿಲ್ಲ ಎನ್ನ ಬಾಯಿಂದ ಸೊಲ್ಲು

ಚಂದಾ / ಸವಿತಾ ಇನಾಮದಾರ್.
 
 





ಚಂದಾ / ಸವಿತಾ ಇನಾಮದಾರ್.

Tuesday, 6 November 2012

ಗೆಳೆಯ ‘ನಲ್ಲ’ ನಾದಾಗ



ಗೆಳೆಯ  ‘ನಲ್ಲ’ ನಾದಾಗ
ಆ ಚಿತ್ತ ಚೋರ ಪೋರ ‘ ನಲ್ಲ ’ನಾದಾಗ
ಹುಸಿ ಮುನಿಸಿನ ಗೆಳೆಯ ಹೋಗಿ
ಅದ್ಯಾಕಾದನೋ  ನಾನರಿಯೆ
ಬಲು ಘನ ಗಂಭೀರ.
 ಸೆಳೆತ – ಮಿಡಿತಗಳಿಗೆ ಅಂಕುಶ
            ಕುಣಿತ – ನಲಿತಗಳ ಅಂತ್ಯ
           ಸಂಯಮದಾ ಲಕ್ಷ್ಮಣ ರೇಖೆ
          ಮದುವೆಯಾದಾಕ್ಷಣ ಈ ಬದಲಾವಣೆ ಯಾಕೆ??
ನನ್ನ ಹುಡುಗುತನವನ್ನು ತಿದ್ದುತ್ತಾ
ಪ್ರೀತಿಯ ಮಹಾಪೂರ ಹರಿಸುತ್ತಾ
ಮೊದಲಿದ್ದ  ಆ ಗೆಳೆಯನಂತಿಲ್ಲ
ಗಾಂಭೀರ್ಯದ ನಗೆ ಬೀರುವ ಈ ‘ ನನ್ನ ನಲ್ಲ’.

ಚಂದಾ / ಸವಿತಾ ಇನಾಮದಾರ್.

Monday, 15 October 2012

ಮಾತೆ ಶಾಂಭವಿ



ಮಾತೆ ಶಾಂಭವಿ
ಶಾಂಭವಿ ಶಿವ- ಶಂಕರಿ..
ಕರುಣಿಸೆ ಪರಮೇಶ್ವರಿ
ಹಗಲು ಭಜಿಸುವೆ ಇರುಳು ಜಪಿಸುವೆ
ಶಿರವಬಾಗಿ ನಾ ನಮಿಸುವೆ..

ಕರವ ಪಿಡಿದೆನ್ನಪ್ಪಿ ಹಡಿದೆ
ಮೋಹ - ಮಾಯಾ ಪಾಶದಿಂದ
ಮದಮತ್ಸರಗಳ ಜಾಲದಿಂದ
ಕಾಯ್ದೆಯನ್ನನು ಶಂಕರಿ ..

ದಿಕ್ಕುಗಾಣದೆ ಅಲೆಯುವವರಿಗೆ
ದಿಶೆಯನು ನೀ ತೋರಿದೆ
ಯಶದ ಕಲಶವ ಕೈಯಲ್ಲಿತ್ತೆ
ಮಾತೆ ನೀ ಅಭಯಂಕರಿ.

Chanda / Savita Inamdar.

Friday, 5 October 2012

ಕಾಲಚಕ್ರ



ಕಾಲಚಕ್ರ
ಕಾಲ ಚಕ್ರವೆಂದೂ ದಣಿಯೋದಿಲ್ಲ
 ಹರಿಯುವ ನದಿಯೆಂದೂ ಹಿಂದಿರುಗಿ ನೋಡೋದಿಲ್ಲ
ನೀಯಾಕೆ ದಣಿದೆಯೋ ಮನುಜಾ
ಯಾಕಾದ್ಯೋ ನೀ ಬಡಪಾಯಿ?

ಹಗಲು ರಾತ್ರಿಗಳು ಬಂದು ಹೋಗತ್ತವೆ
ಕಿವಿಯೊಳಗೇನೋ ಹೇಳಿ ಹೋಗತ್ತವೆ
ಇದು ಆ ದೇವರ ಮಾಯೆ
ಒಮ್ಮೆ ಬಿಸಿಲು  ಮತ್ತೊಮ್ಮೆ ಛಾಯೆ.

ಕಪ್ಪು ಮೋಡಗಳೇ  ಬೆಳ್ಳಿ ಮೋಡಗಳೇ
ಆಗಸವನ್ನೆಲ್ಲಾ ಆವರಿಸಿರಲಿ
ಅದೆಷ್ಟೇ ಕರಿ ಬಣ್ಣವ  ಬಳಿದರೂ ಸಹ
ಸೂರ್ಯನ ಕಿರಣವ ತಡೆಯಲಾರವು.

ನೀಯಾಕೆ ನಿಂತೆಯೋ ಮನುಜಾ
ಧೈರ್ಯವನ್ಯಾಕೆ ಕಳೆದುಕೊಂಡೆ ??
ನೀ ಮುಂದ ಸಾಗಬೇಕು ನೀ ಮುಂದಕ್ಕ ಹೋಗಬೇಕು.
ನಿನ್ನನೇ ನೀನು ಮೊದಲು ಗೆಲ್ಲಬೇಕು. 

ಚಂದಾ / ಸವಿತಾ ಇನಾಮದಾರ್.