ಗೆಳೆಯ ‘ನಲ್ಲ’ ನಾದಾಗ
ಆ ಚಿತ್ತ ಚೋರ ಪೋರ
‘ ನಲ್ಲ ’ನಾದಾಗ
ಹುಸಿ ಮುನಿಸಿನ ಗೆಳೆಯ
ಹೋಗಿ
ಅದ್ಯಾಕಾದನೋ ನಾನರಿಯೆ
ಬಲು ಘನ ಗಂಭೀರ.
ಸೆಳೆತ – ಮಿಡಿತಗಳಿಗೆ ಅಂಕುಶ
ಕುಣಿತ – ನಲಿತಗಳ ಅಂತ್ಯ
ಸಂಯಮದಾ ಲಕ್ಷ್ಮಣ ರೇಖೆ
ಮದುವೆಯಾದಾಕ್ಷಣ ಈ ಬದಲಾವಣೆ ಯಾಕೆ??
ನನ್ನ ಹುಡುಗುತನವನ್ನು
ತಿದ್ದುತ್ತಾ
ಪ್ರೀತಿಯ ಮಹಾಪೂರ
ಹರಿಸುತ್ತಾ
ಮೊದಲಿದ್ದ ಆ ಗೆಳೆಯನಂತಿಲ್ಲ
ಗಾಂಭೀರ್ಯದ ನಗೆ
ಬೀರುವ ಈ ‘ ನನ್ನ ನಲ್ಲ’.
ಚಂದಾ / ಸವಿತಾ ಇನಾಮದಾರ್.
ನಿಜ ನನಗೂ ಅಚ್ಚರಿ ತರಿಸುವುದು ಈ ಗಾಂಭೀರ್ಯತೆ! ಪ್ರಾಯಶಃ ಮುಂದಿನ ದಿನಗಳ ಜವಾಬ್ದಾರಿ ಇದ್ದೀತು.
ReplyDeleteಚಂದಕ್ಕ, ಕವನ ಭಾರಿ ಬರದೀರಲ್ಲ! ಆದರೆ ಈ ಬದಲಾವಣೆಗೆ ಕಾರಣ ನಲ್ಲನೊಬ್ಬನೇನಲ್ಲ! :)
ReplyDeleteಹೌದು @Badarinath Palavalli. ಸರಸ - ವಿರಸ ಎರಡೂ ದಾಂಪತ್ಯದ ಪಾರ್ಶ್ವಗಳಲ್ಲವೇ?? ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ReplyDeleteಧನ್ಯವಾದಗಳು ಗುರುಪ್ರಸಾದ ಕುರ್ತಕೋಟಿ. ಹೂಂ..ಈ ಬದಲಾವಣೆಗೆ ಕಾರಣ ಕೇವಲ ನಲ್ಲನೊಬ್ಬನೇ ಅಂತಾ ಅಂದಿಲ್ಲಾ. ಮನುಜ ಪರಿಸ್ಥಿತಿಯ ಕೈಗೊಂಬೆ. ಆದ್ರೂ ಅವನಲ್ಲಿ ಅಥವಾ ಜೀವನದಲ್ಲಿ ಆದ ಬದಲಾವಣೆಯನ್ನು ಆಕೆ ನಲ್ಲನನ್ನು ಬಿಟ್ಟು ಬೇರೆಯವರಲ್ಲಿ ಹ್ಯಾಗೆ ಹೇಳಿಯಾಳು?? ಅಲ್ವೇ??
ReplyDelete