ಮಾತೆ ಶಾಂಭವಿ
ಶಾಂಭವಿ ಶಿವ-
ಶಂಕರಿ..
ಕರುಣಿಸೆ ಪರಮೇಶ್ವರಿ
ಹಗಲು ಭಜಿಸುವೆ
ಇರುಳು ಜಪಿಸುವೆ
ಶಿರವಬಾಗಿ ನಾ
ನಮಿಸುವೆ..
ಕರವ ಪಿಡಿದೆನ್ನಪ್ಪಿ
ಹಡಿದೆ
ಮೋಹ - ಮಾಯಾ ಪಾಶದಿಂದ
ಮದ –ಮತ್ಸರಗಳ ಜಾಲದಿಂದ
ಕಾಯ್ದೆಯನ್ನನು ಶಂಕರಿ
..
ದಿಕ್ಕುಗಾಣದೆ ಅಲೆಯುವವರಿಗೆ
ದಿಶೆಯನು ನೀ
ತೋರಿದೆ
ಯಶದ ಕಲಶವ
ಕೈಯಲ್ಲಿತ್ತೆ
ಮಾತೆ ನೀ
ಅಭಯಂಕರಿ.
Chanda / Savita Inamdar.
No comments:
Post a Comment