 ಜಾಗೇಶ್ವರದ ಬೆಟ್ಟಗಳ
ಜಾಗೇಶ್ವರದ ಬೆಟ್ಟಗಳ  
ಕಣಕಣದಲಿ, ಕ್ಷಣ ಕ್ಷಣದಲಿ 
ಶಿವ - ಸತಿಯ ವಿಯೋಗದಲ್ಲಿ 
ಅಲೆಯುತ್ತಿರುವುದನು ಕಂಡೆ. 
ಒಮ್ಮೆ ಲಿಂಗ ರೂಪದಲ್ಲಿ
ಮತ್ತೊಮ್ಮೆ ನಟರಾಜನ ರೂಪದಲ್ಲಿ
ಮಗದೊಮ್ಮೆ ಅರ್ಧನಾರೀಶ್ವರನ ರೂಪದಲ್ಲಿ. 
ಆಹಾ..ಏನೆಂದು ಬಣ್ಣಿಸಲಿ ಆ ಲಿಂಗ ಭೈರವನ 
ಅದ್ಭುತ ತಾಂಡವ ರೂಪ. 
ಗಿಡಮರಗಳೂ ಅವನೊಂದಿಗೆ ನರ್ತಿಸುವುದ ಕಂಡು
ದೂರವಾಗುವುದು ಮನದ ತಾಪ. 
ಸವಿತಾ ಇನಾಮದಾರ್ 
 
 
No comments:
Post a Comment