Followers

Wednesday, 15 June 2016

ಪ್ರೇಮ ಸಂದೇಶ-






ನಲ್ಲನ ಪ್ರೇಮ ಸಂದೇಶವ ಕೇಳಿ
ನಲ್ಲೆಯ ಕಪೋಲ ಕೆಂಪಾಯಿತು
ಸೂರ್ಯನ ಕಣ್ಸನ್ನೆಯ ಕಂಡು
 ಚಲಿಸುವ ಮೋಡವೂ ಕೆಂಪಾಯಿತು..

ಪ್ರಿಯತಮನ ಪಿಸು ಮಾತಿನಲ್ಲಿ
ಸವಿ ಜೇನು ತುಂಬಿತ್ತು
ಬೇಗ ಸೇರುವಾ ಎಂಬ
ಸಂಕೇತ ಸಾರುತ್ತಿತ್ತು.

ಇನಿಯನ ಬಾಹು ಬಲದ ಬಿಗಿತದಲ್ಲಿ
ಅಮಿತವಾದ ಸುಖ
ಆ ಕ್ಷಣ ಬೇಗ ಬರಲೆಂದು
ಕಾಯುತ್ತಿರುವೆ ಎನ್ನ ಪ್ರಾಣ ಸಖಾ.  

ಚಂದಾ / ಸವಿತಾ ಇನಾಮದಾರ್.  

3 comments: