Followers

Monday, 29 February 2016

ಹುಲ್ಲ ಹಾಸಿಗೆ....


ಇನಿಯನ ಆಗಮನಕ್ಕಾಗಿ ಕಾಯುತ್ತಿಹಳೀ ಭಾಮಿನಿ
ಜನುಮ ಜನುಮಕ್ಕೂ ಬೇಕೆನಗೆ ಸ್ವಾಮಿ ನೀ

ನೀ ಜೊತೆಯಿದ್ದರೆ ಬೇಡೆನಗೆ ಅರಮನೆಯ ಸುಪ್ಪತ್ತಿಗೆ
ಸಾಕೆನಗೆ ರಾಗಿಯ ಮುದ್ದೆ ಒಪ್ಪೊತ್ತಿಗೆ.

ಬಾ ಬೇಗ ನಲ್ಲಾ ರಾತ್ರಿಯಾಗುತ್ತಿದೆ
ಬರುವುದೆಮಗೆ ಹುಲ್ಲ ಹಾಸಿಗೆಯಲ್ಲೂ ಗಾಢ ನಿದ್ದೆ.

ಚಂದಾ / ಸವಿತಾ ಇನಾಮದಾರ 

Saturday, 20 February 2016

ಕೆಂಪಾಯಿತು ಬಾನು


ಕೆಂಪಾಯಿತು ಬಾನು

ನಲ್ಲಾ..
ನಿನ್ನ ಆಲಿಂಗನದ ಸ್ವರ್ಗ ಸುಖದಲ್ಲಿದ್ದವಳಿಗೆ
ಬೆಳಗಾದದ್ದೇ ತಿಳಿಯಲಿಲ್ಲ..
ಮತ್ತೆ ವಿರಹದ ನೋವ ಕೊಟ್ಟು
ಎನ್ನನಗಲಿ ನೀ ಹೋಗೇ ಬಿಟ್ಟೆಯಲ್ಲ?

ಒಬ್ಬಂಟಿಯಾದಾಗ ಏನೂ ರುಚಿಸದೆನಗೆ
ನನ್ನ ನೋವು ಕಾಣದೇ ನಿನಗೆ?.
ನೀನಿರದೆ ಸಿಹಿಯೂ ಕಹಿಯಾಗುವುದು
ಹಸಿವೆಯೂ ಮಾಯವಾಗುವುದು.

ಕಾತರದಿ ನಿನ್ನಾಗಮನಕೆ
ಕಾಯುತಿವೆ ಎನ್ನ ಕಂಗಳು
‘ಚಿನ್ನಾ’ ಎಂಬ ಸವಿ ನುಡಿ ಕೇಳಲು
ಕಾಯುತಿವೆ ಎನ್ನ ಕಿವಿಗಳು.

ನನ್ನ ಪ್ರೀತಿಯ ಆಳ ಅರಿತ
ಆ ಬಾನೂ ಸಹ ಕೆಂಪಗಾಪಾಯಿತು
ಮುತ್ತಿನ ಮಳೆಗೆ ಕಾಯುತ್ತಿದ್ದ
ಇಳೆಯೂ ತಂಪಾಯಿತು.

ಮುಸ್ಸಂಜೆಯಾಯಿತು ಬಂದೆನ್ನ ಸೇರು ನಲ್ಲ
ಇನ್ನುಈ ವಿರಹದ ಬೇಗೆಯನ್ನು ನಾ ತಾಳೆನಲ್ಲಾ.

ಸವಿತಾ ಇನಾಮದಾರ್.




Friday, 5 February 2016

ಇನ್ನು ದೂರವಿಲ್ಲ..

ಇನ್ನು ದೂರವಿಲ್ಲ..

ಓ ನನ್ನ ಪ್ರೀತಿಯ ನಲ್ಲಾ
ಇಂದೇಕೋ  ಎನಗೆ ಕೆಲಸದಲ್ಲಿ ಮನಸೇ ಇಲ್ಲ
ನಿನ್ನ ನೆನಪು ಬಲು ಕಾಡುತಿದೆ
ಓಡೋಡಿ ನಿನ್ನ ಸೇರಬೇಕೆನಿಸುತಿದೆ
ಬರಲೇ ನಾ ಅಲ್ಲಿ ಹಾರಿ..
ದೂರವಿಲ್ಲ ಇನ್ನು ನಮ್ಮ  ದಾರಿ.

ಅಪರಂಜಿಯಂಥಾ ನಮ್ಮ ಪ್ರೀತಿಯ ಕಂಡು
ಆ ಮಹಾದೇವನೇ ಒಲಿದಿರುವನು
ಪ್ರತಿ ಕ್ಷಣವೂ ನಿನ್ನನ್ನೇ ನೆನೆಯುವಂತೆ ಮಾಡಿಹನು.
ನಮ್ಮ ಪ್ರೇಮದಲ್ಲಿ ಅಡಗಿದೆ ಭರವಸೆಯ ಶಕ್ತಿ
ಕಳೆದು ಹೋದ ಪ್ರೀತಿ ಮರಳಿ ಪಡೆದಾಗ
ಹೆಚ್ಚುವುದು ಆ ಪರಶಿವನಲ್ಲಿ ಭಕ್ತಿ.

ಸವಿತಾ ಇನಾಮದಾರ್.