Followers

Wednesday 1 April 2015

ಇನಿಯಾ.. ಏಕೆ ಹೀಗೆ ಕಾಡುವೆ ?


ಹ್ಯಾಗೆ ಹೇಳಲಿ ನಿನಗೆ? ನಾ ಏನೆಂದು ತಿಳಿಸಲಿ?
ಮನಸಿನಲಿ ನುಸುಳಿರುವೆ, ಮುಂಗುರುಳ ತೀಡುತಿರುವೆ
ಮಿಂಚಿನಂತೆ ಕಂಡು ಕಾಣದಂತೆ ಮಾಯವಾಗುವೆ
ಇನಿಯಾ ಏಕೆ  ಹೀಗೆ ಕಾಡುವೆ ? ಎನ್ನನ್ನೇಕೆ  ನೀ ಕಾಡುವೆ??

ವಸಂತ ಋತುವಿನಲ್ಲಿ ಹೊಸ ಚಿಗುರಿನಂತೆ
ಎನ್ನ ಮನಸು ನೋಡು ಮತ್ತೆ ಚಿಗುರುತಿದೆ
ತಂಗಾಳಿ ಬೀಸುತ್ತ ನಿನ್ನ ಪಿಸುಮಾತು ಸಾರುತಿದೆ
ಹಳೆಯ ನೆನಪುಗಳ ಸುರುಳಿ ಉರುಳುತ್ತ ಬರುತಿದೆ

ಮೈಮನದಲಿ ನವರಾಗ ಉಕ್ಕಿಹರಿಯುತಿದೆ
ನಿನ್ನ ಒಂದು ನೋಟಕ್ಕೆ , ಆ ಮಧುರ ಸ್ಪರ್ಷಕ್ಕೆ
ಅನುದಿನವೂ ನಿನ್ನ ಸಾಮೀಪ್ಯವನ್ನು  ಬಯಸುತಿರುವೆ
ಕಾಯುತ್ತ ಕುಳಿತಿರುವೆ ಇನಿಯಾ ನೀ ಬೇಗ ಬಾರೆಯಾ??

ಚಂದಿರ ಹೇಳುತಿಹನು ಸುಂದರ ಜೋಗುಳ
ಕಂಗಳಲ್ಲಿ ಮಿನುಗುತಿದೆ ಹೊಳಪು ನಕ್ಷತ್ರಗಳ
ನಮ್ಮ ಕನಸು ನನಸಾಗಲೆಂದು ಮಧುರ ಮಿಲನವಾಗಲೆಂದು
ಬೇಡಿಕೊಳ್ಳೋಣ ಬಾ ಇನಿಯಾ ಆ ದೇವರಲ್ಲಿ
ಮತ್ತೊಮ್ಮೆ ತರುವನು ಸಂತೋಷ ನಮ್ಮ ಬಾಳಿನಲ್ಲಿ.


ಚಂದಾ / ಸವಿತಾ ಇನಾಮದಾರ್. 

7 comments:

  1. ಧನ್ಯವಾದಗಳು @Anant ji..

    ReplyDelete
  2. ತುಸುವಾದರೂ ಒಲುಮೆಯ ಬಯಕೆಗಳಿದ್ದರೆ ಭಗವಂತ ಪೂರ್ತೀ ಸಾಕ್ಷಾತ್ಕಾರ ಕೊಡುವನು, ಅದರಲಿ ಎರಡು ಮಾತಿಲ್ಲ.
    'ಹಳೆಯ ನೆನಪುಗಳ ಸುರುಳಿ ಉರುಳುತ್ತ ಬರುತಿದೆ' ಇರಲಿ ಈ ತುಡಿತವು ಹೀಗೇ...

    ReplyDelete
  3. ಹಾಡು ಹಳೆಯದಾದರೇನು ಭಾವ ನವನವೀನ ಅಲ್ವೇ ತಮ್ಮಾ Badarinaarh..ನಿನ್ನ ಮಾತು ನಿಜ..ಕಾದು ನೋಡೋಣ..ಹಹಹಹ

    ReplyDelete
  4. If you read this before your sherkhan he will never leave you even for a second....

    ReplyDelete
    Replies
    1. Hhahah.. Thank u soo much dear Pushpaa.. I do the same.. hahaha

      Delete
  5. ಇನಿಯನ ಕಾಯುವಿಕೆಯ ಭಾವತೀವ್ರತೆಯೇ ಉನ್ನತ ಅನುಭವ.
    ಚನ್ನಾಗಿದೆ

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುರೇಶ್ ಅವ್ರೇ.

      Delete