Followers

Thursday, 22 May 2014

ತಾಯೇ ! ಏನು ಬೇಡಲಿ ಇನ್ನು?



ನಿನ್ನ ಕಾಣಲು ತಾಯೇ 
ಕನಸುಗಳ ನಾಕಂಡೆ
ನೀ ಮನಸು ಮಾಡಿದೊಡೆ
ನಾ ನೋಡಿ ಬಂದೆ, ನಿನ್ನ ಬಳಿ ಬಂದ.

ಕಂಡಿದ್ದೆ ನಾನಿನ್ನ ದಿವ್ಯ ರೂಪ
ಹಚ್ಚಿದ್ದೆ ಅಲ್ಲೊಂದು ಭಕುತಿಯಾ ದೀಪಾ.

ತಾಯೇ ನಮ್ಮೆಡೆಗೂ ಸದಾ ಪ್ರೇಮದಿಂದಲಿ ನೋಡು.
ಮಾತೆ ದರುಷನ ಭಾಗ್ಯ ಎಲ್ಲರಿಗೂ ನೀ ನೀಡು.

ಎಲ್ಲವನೂ ಕೊಟ್ಟಿರುವೆ ಏನು ಬೇಡಲಿ ಇನ್ನು??
ಜಗವನ್ನೇ ಬಿಟ್ಟಿರುವೆ ಏಕೆ ಕಾಡಲಿ ನಾನು?? 

ಚಂದಾ / ಸವಿತಾ ಇನಾಮದಾರ್.

Thursday, 8 May 2014

ಆರ್ಭಟ




 ಗುಡುಗು ಸಿಡಿಲಿನ ಆರ್ಭಟದೊಡನೆ
ಚರಂಡಿಯಲ್ಲಿ ಕೊಚ್ಚಿಹೋಗುತ್ತಿದ್ದ
ಸಾವಿರಾರು ಮುಗ್ಧರ ಹೋಂಗನಸುಗಳ ರಾಶಿಯ ಕಂಡೆ
ವಾಸ್ತವದೆಡೆಗೆ ತಿರುದಾಗ ನೆನಪಾಯ್ತು
ಇದು ದೇಶದ ರಾಜಧಾನಿಯೆಂದು.
ಇಲ್ಲಿ ದಿನವೂ ದಿಗಿಲುಗೊಳಿಸುವ ಹೊಸ
ಆರ್ಭಟಗಳು ಕೇಳಿಬರುತ್ತವೆಯಲ್ಲವೇ
ಆಶ್ವಾಸನೆಗಳ ಸುಳಿಯಲ್ಲಿ  ಸಿಲುಕಿ  ಬಳಲದವರು
ಇಲ್ಲಿ ಯಾರೂ  ಉಳಿದೇ ಇಲ್ಲವೇ??

ಚಂದಾ / ಸವಿತಾ ಇನಾಮದಾರ್