Followers

Saturday, 27 July 2013

ನಿರೀಕ್ಷೆ…





ಮಂದಹಾಸ ಮೊಗದಲ್ಲಿ
ಹೊಂಗನಸು ಕಂಗಳಲ್ಲಿ
ಕಿರುನಗೆಯ ಬೀರುತ 
ನಿನ್ನಾಗಮನಕ್ಕಾಗಿ ಕಾದಿರುವೆ ನಲ್ಲಾ
ಇನ್ನಾದರೂ ನೀ ಬಾರೆಯಾ??

ನಿನ್ನ ನಿರೀಕ್ಷೆಯಲ್ಲೇ ನಾ ಕಳೆದ
ಆ ಸಮಯದ ಲೆಕ್ಕ ಕೊಡಲು
ನನ್ನ ರಮಿಸಿ ಮತ್ತೆ ನಗಿಸಲು ನಲ್ಲಾ
ಇನ್ನಾದರೂ ನೀ ಬಾರೆಯಾ?? 


ಚಂದಾ / ಸವಿತಾ ಇನಾಮದಾರ್.
 

Wednesday, 3 July 2013

ಮಣ್ಣಿನ ಘಮಲು..ಪ್ರೀತಿಯ ಹೊನಲು..




 ಹಳ್ಳಿಯಿಂದ  ದಿಲ್ಲಿಗೆ  ಬಂದರೂ
ತಾಯ ಮಡಿಲನು ಹ್ಯಾಗೆ ಮರೆಯಲಿ ??
ಅಲ್ಲಿನ ಮಣ್ಣಿನ ಮಧುರ ಘಮಲಿಗೆ
ಇಲ್ಲಿನ ಮಾಲಿನ್ಯವ  ಹ್ಯಾಗೆ  ಹೋಲಿಸಲಿ??
ಹಚ್ಚ ಹಸಿರು ಎಲೆಗಳಲಿ ಕಂಡೆ ನನ್ನ ಬಾಲ್ಯವ
ಹಣದ ಹೊಳೆ ಹರಿಸಿದರೂ ಕಟ್ಟೆನದರ ಮೌಲ್ಯವ
ಕೈ ಬೀಸಿ ಕರೆಯುತಿಹವು ಹಣ್ಣು – ಹೂವು, ಕಾಯಿ
ಕಾಯುತ್ತಾ ನಿಂತಿಹಳು ನನ್ನ ಪ್ರೇಮಮಯಿ ತಾಯಿ.
ಅವಸರದಿ ಅಪ್ಪಾಜಿ ಓಡೋಡಿ ಬರುವರು
ಮಗಳ ಮೊಗವ ನೋಡಿದೆಡೆ ಬರಸೆಳೆದು ಅಪ್ಪುವರು.
ತಂದೆ- ತಾಯಂದಿರ ಈ ಸುಮಧುರ ಬಾಧವ್ಯ
ಕೊನೆಯವರೆಗೆ ಇರುವುದು ಚಿರ ನೂತನ – ಚಿರ ನವ್ಯ.
ಚಂದಾ / ಸವಿತಾ ಇನಾಮದಾರ್.