ನಲ್ಲಾ..
ಎನ್ನ ಅಂತರಂಗವನು
ಅರಿತಿರುವ ನೀನು
ಇಂದೇಕೆ ಮೌನವಾಗಿ
ಕುಳಿತಿರುವೆ? 
ನಿನ್ನ ಕೋಪವನು ಎದುರಿಸಬಲ್ಲೆ
ಆದರೆ ನಿನ್ನ ಅಲಕ್ಷತೆ
ನಾ ತಾಳಲಾರೆ. 
ನಿನ್ನ ಪ್ರೀತಿಯಲ್ಲಿ
ಮಿಂದವಳಿಗೆ 
ಅನುರಾಗದ ಅರಮನೆಯಿತ್ತೆ
ಇಂದು ಒಬ್ಬಂಟಿಯನ್ನಾಗಿಸಿ
ಬಿಸಿಲ ಧಗೆಯಲ್ಲಿ
ನಿಲ್ಲಿಸಿದೆ.
ನನ್ನ ತಪ್ಪಾದರೇನು
ಹೇಳು  ?
ನಿನ್ನ ಪ್ರೀತಿಸೋದೇ
ತಪ್ಪಾ ?
ಹಾಗಿದ್ದರೆ ನೀ ಕೊಡುವ
ಪ್ರತಿ ಶಿಕ್ಷೆಯನು
ಒಲುಮೆಯಿಂದ ಒಪ್ಪುವೆ.
ನನ್ನ ಬಿಟ್ಟು ನೀ
ಇರಲಾರೆಯಂಬ 
ಒಂದೇ ಆಸೆಯಿಂದ ಮತ್ತೆ
ಕಾಯುವೆ. 
ಚಂದಾ / ಸವಿತಾ ಇನಾಮದಾರ್.

 
No comments:
Post a Comment