ದುರ್ಮುಖಿನಾಮ ಸಂವತ್ಸರವಿದ್ದರೂ ನಲ್ಲಾ..
ಸುಮುಖಿಯಾಗಿಸಿ ಬಾ ಸವಿಯೋಣ ಬೇವು ಬೆಲ್ಲ.
ಈ ಬೆಲ್ಲದ ಸಿಹಿ ಮರೆಸುವುದು
ಜೀವನದಲ್ಲಿ ಬರುವ ಬೇವಿನಂತಹ ಕಹಿಯನ್ನು.
ಎರಡರ ಸಮರಸದಿಂದ
ಸಾಗಿಸೋಣ ನಮ್ಮ ಬಾಳ ನೌಕೆಯನ್ನು.
ಒಲವಿನ ಮಾತಿನಿಂದ
ಮರೆಸುಯುವೆ ನಿನ್ನೆ ಸಿಡುಕಿದ್ದನ್ನು
ನನ್ನ ಚಿನ್ನಾ ಎಂಬ ಮೃದು ಕರೆಯಲ್ಲಿ
ಮರೆಸುಯುವೆ ನನ್ನಿರುವನ್ನು.
ಯುಗ-ಯುಗಗಳೇ ಕಳೆದರೂ
ಅಳಿಯದೆಮ್ಮ ಪ್ರೀತಿಯ ಬೆಸುಗೆ
ನೀ
ನನ್ನವನಾಗಿರುವುದೇ
ಎನಗೆ ಪ್ರತಿ
ಯುಗಾದಿಯ
ಕೊಡುಗೆ !!
ಚಂದಾ / ಸವಿತಾ ಇನಾಮದಾರ್
ಚಂದಾ / ಸವಿತಾ ಇನಮದಾರ್.
No comments:
Post a Comment