Followers

Thursday, 1 December 2016

ಪ್ರೀತಿಸೋದೇ ತಪ್ಪಾ ?






ನಲ್ಲಾ..
ಎನ್ನ ಅಂತರಂಗವನು ಅರಿತಿರುವ ನೀನು
ಇಂದೇಕೆ ಮೌನವಾಗಿ ಕುಳಿತಿರುವೆ?
ನಿನ್ನ ಕೋಪವನು ಎದುರಿಸಬಲ್ಲೆ
ಆದರೆ ನಿನ್ನ ಅಲಕ್ಷತೆ ನಾ ತಾಳಲಾರೆ.
ನಿನ್ನ ಪ್ರೀತಿಯಲ್ಲಿ ಮಿಂದವಳಿಗೆ
ಅನುರಾಗದ ಅರಮನೆಯಿತ್ತೆ
ಇಂದು ಒಬ್ಬಂಟಿಯನ್ನಾಗಿಸಿ
ಬಿಸಿಲ ಧಗೆಯಲ್ಲಿ ನಿಲ್ಲಿಸಿದೆ.
ನನ್ನ ತಪ್ಪಾದರೇನು ಹೇಳು  ?
ನಿನ್ನ ಪ್ರೀತಿಸೋದೇ ತಪ್ಪಾ ?
ಹಾಗಿದ್ದರೆ ನೀ ಕೊಡುವ ಪ್ರತಿ ಶಿಕ್ಷೆಯನು
ಒಲುಮೆಯಿಂದ ಒಪ್ಪುವೆ.
ನನ್ನ ಬಿಟ್ಟು ನೀ ಇರಲಾರೆಯಂಬ
ಒಂದೇ ಆಸೆಯಿಂದ ಮತ್ತೆ ಕಾಯುವೆ. 

ಚಂದಾ / ಸವಿತಾ ಇನಾಮದಾರ್.