ಏ ನನ್ನ ಪ್ರೀತಿಯ ಪಮ್ಮಿ…
ನನ್ನ ಮಕ್ಕಳ
ಮೆಚ್ಚಿನ
ಗುಂಡು
ಗುಂಡಗಿನ ಮಮ್ಮೀ..
ಇನ್ನಾರ
ಮಾಡ ಸ್ವಲ್ಪ ನೀ
ತಿನಸೂದು
- ತಿನ್ನೂದು ಕಮ್ಮಿ..
ಇಲ್ಲss
..ನೀ ಯಾರಿಗೂ ಇಲ್ಲಾ ಕಮ್ಮಿ,
ಆದ್ರ
ನಿನ್ನss ನೋಡಿ ನಾಚಲಿಕ್ಕೆ ಹತ್ತ್ಯಾವಲ್ಲ
ನಮ್ಮ
ಧಾರವಾಡದ ಎಮ್ಮಿ..
ಏ ಪಮ್ಮೀ…ನಿಂದ್ರ..ನಿಂದ್ರು..
ಸ್ವಲ್ಪ
ನನ್ನ ಮಾತು ಕೇಳಿಲ್ಲೆ..
ಛೇ..ಛೇ..
ಬ್ಯಾಡ … ಬ್ಯಾಡಾ ರಾಣೀ..
ನಾ ಹೀಂಗಂತೀನಿ
ಅಂತ
ಮಾರೀ
ಸೊಟ್ಟ ಮಾಡ ಬ್ಯಾಡಾ
ಮತ್ತ
ಜಿಮ್ಮಿಗೂ ನೀ ಸೇರಕೋ ಬ್ಯಾಡಾ
ಅಲ್ಲಿಗೆ
ಹೋಗಿ ಎಷ್ಟ ಒದ್ದಾಡಿದ್ರೂನೂ ,
ಬೇಕಾದಷ್ಟು
ರೊಕ್ಕಾ ಸುರುದ್ರೂನೂ ,
ನೀ ಆಗಂಗೇ
ಇಲ್ಲಾ ಬಿಡು ‘ ಕಮ್ಮಿ.. ‘
ಆದ್ರೂ
ಆದ್ರೂ.. ನೀನssss.. ನನ್ನ..
ಪ್ರೀತಿಯ ಡುಮ್ಮ ಡುಮ್ಮಗಿನ .. ಪಮ್ಮಿ..
ನನ್ನ
ಮುದ್ದಿನ ಮಕ್ಕಳ ಪ್ರೀತಿಯ ಮಮ್ಮೀ…
ಚಂದಾ
/ ಸವಿತಾ ಇನಾಮದಾರ್.