Followers
Monday, 15 October 2012
Friday, 5 October 2012
ಕಾಲಚಕ್ರ
ಕಾಲಚಕ್ರ
ಕಾಲ ಚಕ್ರವೆಂದೂ ದಣಿಯೋದಿಲ್ಲ
ಹರಿಯುವ ನದಿಯೆಂದೂ ಹಿಂದಿರುಗಿ ನೋಡೋದಿಲ್ಲ
ಹರಿಯುವ ನದಿಯೆಂದೂ ಹಿಂದಿರುಗಿ ನೋಡೋದಿಲ್ಲ
ನೀಯಾಕೆ ದಣಿದೆಯೋ ಮನುಜಾ
ಯಾಕಾದ್ಯೋ ನೀ ಬಡಪಾಯಿ?
ಯಾಕಾದ್ಯೋ ನೀ ಬಡಪಾಯಿ?
ಹಗಲು ರಾತ್ರಿಗಳು ಬಂದು ಹೋಗತ್ತವೆ
ಕಿವಿಯೊಳಗೇನೋ ಹೇಳಿ ಹೋಗತ್ತವೆ
ಇದು ಆ ದೇವರ ಮಾಯೆ
ಒಮ್ಮೆ ಬಿಸಿಲು ಮತ್ತೊಮ್ಮೆ ಛಾಯೆ.
ಕಪ್ಪು ಮೋಡಗಳೇ ಬೆಳ್ಳಿ ಮೋಡಗಳೇ
ಆಗಸವನ್ನೆಲ್ಲಾ ಆವರಿಸಿರಲಿ
ಅದೆಷ್ಟೇ ಕರಿ ಬಣ್ಣವ ಬಳಿದರೂ ಸಹ
ಸೂರ್ಯನ ಕಿರಣವ ತಡೆಯಲಾರವು.
ನೀಯಾಕೆ ನಿಂತೆಯೋ ಮನುಜಾ
ಧೈರ್ಯವನ್ಯಾಕೆ ಕಳೆದುಕೊಂಡೆ ??
ನೀ ಮುಂದ ಸಾಗಬೇಕು ನೀ ಮುಂದಕ್ಕ ಹೋಗಬೇಕು.
ನಿನ್ನನೇ ನೀನು ಮೊದಲು ಗೆಲ್ಲಬೇಕು.
ಚಂದಾ / ಸವಿತಾ ಇನಾಮದಾರ್.
Subscribe to:
Posts (Atom)