Followers

Friday, 11 August 2017

ಕನ್ನಡಾಂಬೆಯ ಕಣ್ಣೀರು



ಹಲಬುತಿಹಳು ಕನ್ನಡಾಂಬೆ..
ತನ್ನ ಮಕ್ಕಳ ಹುಚ್ಚು ಕಚ್ಚಾಟವ ನೋಡಿ
ಗಡಗಡನೆ ನಡುತಿಹಳು
ಮುಂಬರುವ ವಿನಾಶದ ಮುನ್ಸೂಚನೆಯ ಕಂಡು.

ಸಮರಸದ ಬದುಕಿನಲಿ ದ್ವೇಷದ ಹುಳಿಯ ಹಿಂಡಿ
ಒಡೆದು ಹೋದ ಒಗ್ಗಟ್ಟನ್ನು ನೋಡಿ
ಕುಹಕದಿ ನಲಿವ ದಾಂಢಿಗರ ಕೇಕೆಯನು ಕೇಳಿ
ಕೊರಗುತಿಹಳು ಕನ್ನಡಾಂಬೆ.

ಸಮಯ ಮಿಂಚುವುದಕೂ ಮುನ್ನ
ಎಚ್ಚತ್ತಿಕೊಳ್ಳಿ ಕಂದಮ್ಮಗಳೇ
ಎನ್ನ ಕರುಳ ಬಳ್ಳಿಯನು ಕತ್ತರಿಸದಿರಿ ಮಕ್ಕಳೇ
ಎಂದೆನ್ನುತ ಬಿಕ್ಕುತಿಹಳು ಕನ್ನಡಾಂಬೆ.

ವೀರ ಯೋಧರ ನಾಡಲ್ಲಿ
ಹೇಡಿಗಳ ಹಾವಳಿಯನು ತಡೆದು
ಭಾತೃತ್ವದ ಬೀಜವನ್ನು ಮತ್ತೆ ಬಿತ್ತಿರಿ
ಕನ್ನಡದ ಬಾವುಟವನು ಇನ್ನೂ ಮೇಲಕ್ಕೆತ್ತಿರಿ.

ಚಂದಾ / ಸವಿತಾ ಇನಾಮದಾರ್.