Followers

Tuesday, 22 November 2016

ಶಿವ-ಶಿವೆ




ಸತಿಯ ಪ್ರೇಮಕೆ ಮನಸೋತ ಶಿವನು
ಪತಿಯ ಪಟ್ಟವನೇರಿದ,
ಅರ್ಧಾಂಗಿಯ ಅಭಿಲಾಷೆಗಾಗಿ
ಶಂಕರ ಅರ್ಧನಾರೀಶ್ವರನಾದ.

ಪ್ರೀತಿಸಿ, ಮೋಹಿಸಿದ ಜೋಗೇಶ್ವರ
ಕೈಹಿಡಿದವಳ ಜೋಳಿಗೆಯನು
ಅಮೂಲ್ಯ ಪ್ರೀತಿಯಿಂದ ತುಂಬಿದ
ಶಿವರಾತ್ರಿಯ ಮಹಿಮೆ ಹೆಚ್ಚಿತು
ಶಿವಶಿವೆಯರ ಪುನರ್ ಮಿಲನದಿಂದ

ಚಂದಾ / ಸವಿತಾ ಇನಾಮದಾರ್.