Followers

Thursday, 24 March 2016

ರಂಗಿನೋಕುಳಿ




ನಮ್ಮ ಪ್ರಥಮ ಮಿಲನದ ಆ ಮಧುರ ಕ್ಷಣಗಳು 
ಮತ್ತೆ ಮತ್ತೆ ನೆನಪಾಗುತಿವೆಯಲ್ಲಾ ನಲ್ಲಾ..
ಆಹಾ..ಅದೆಂಥಾ ಅಪೂರ್ವ ಪಯಣ !!


ನಿನ್ನ ಬಲಿಷ್ಠ ಭುಜದ ಮೇಲೆ
ನಾ ಮೈಮರೆತು ಮಲಗಿದ್ದೆ
ನನ್ನನ್ನು ಎಬ್ಬಿಸದೇ ನೀ ನಿದ್ದೆಗೆಟ್ಟಿದ್ದೆ.

ನನ್ನ ಮುಂಗುರುಳ ಚೆಲ್ಲಾಟ
ನಿನ್ನ ಆ ನೇರ ನೋಟ,
ಇನ್ನೂ ಎನ್ನ ಮೈ ನವಿರೇಳುತಿದೆ.


ಥಟ್ಟನೇ ಕಂಗಳು ಒಂದಾದಾಗ
ಎಲ್ಲೆಡೆಗೂ ರಂಗಿನೋಕುಳಿ ಚಿಮ್ಮಿತ್ತು
ನಾಚಿ ನೀರಾಗಿ ಮಾತೇ ಬಾರದಾಗಿತ್ತು.


ನಮ್ಮೀರ್ವರ ಮಧುರ ಮಿಲನಕೆ
ಆ ಪರಶಿವನ ಅನುಗ್ರಹವಿತ್ತು.


ಅಪರಿಚಿತನ ಪರಿಚಯವಾಗಲು 
ಪುನರ್ಜನ್ಮದ ಬಂಧನವೇ ಕಾರಣವಾಗಿತ್ತು. 

ಜೀವನದಲ್ಲಿ ರಂಗು ತುಂಬಿದವನ
ಹೃದಯದಲ್ಲಿ ಎನಗೆ ಸ್ಥಾನ ಮಾನ ಸಿಕ್ಕಿತ್ತು.



. ಚಂದಾ/ ಸವಿತಾ ಇನಾಮದಾರ್.