ಇನಿಯ                       
ಹೇಗೆ ಹೇಳಲಿ ಏನು ಹೇಳಲಿ 
ತಿಳಿಯದಾಗಿದೆ ನನಗೆ ಇನ್ನೂ
ಮೊದಲ ಬಾರಿ ಒಲುಮೆ ಕುಸುಮ 
ಅರಳಿ ನಿಂತ ಪರಿಯನು
                            
ನಿನ್ನ ಒಂದು ನೋಟವೇ ಸಾಕು            
                            ಎನ್ನ
ಮುದುಡಿದ ಮುಖವರಳಲು
                            ನಿನ್ನ
ಸ್ವರದ ಮೋಡಿಯಲ್ಲಿ
                            ನನ್ನ
ನಾನೇ ಮೈಮರೆಯಲು 
ಯಾರಿಗೆ ಹೇಳಲಿ  ಮನದ ಮಾತು
ಹೃದಯದಲ್ಲಿ  ನೆನೆಸಿರುವೆ
ಬೇಗ ಬಾರೆಯ ಎನ್ನ ಇನಿಯ
ನಿನಗಾಗಿ  ಕಾಯುತಿರುವೆ. 
ಚಂದಾ / ಸವಿತಾ  ಇನಾಮದಾರ್