Followers

Monday, 15 October 2012

ಮಾತೆ ಶಾಂಭವಿ



ಮಾತೆ ಶಾಂಭವಿ
ಶಾಂಭವಿ ಶಿವ- ಶಂಕರಿ..
ಕರುಣಿಸೆ ಪರಮೇಶ್ವರಿ
ಹಗಲು ಭಜಿಸುವೆ ಇರುಳು ಜಪಿಸುವೆ
ಶಿರವಬಾಗಿ ನಾ ನಮಿಸುವೆ..

ಕರವ ಪಿಡಿದೆನ್ನಪ್ಪಿ ಹಡಿದೆ
ಮೋಹ - ಮಾಯಾ ಪಾಶದಿಂದ
ಮದ –ಮತ್ಸರಗಳ ಜಾಲದಿಂದ
ಕಾಯ್ದೆಯನ್ನನು ಶಂಕರಿ ..

ದಿಕ್ಕುಗಾಣದೆ ಅಲೆಯುವವರಿಗೆ
ದಿಶೆಯನು ನೀ ತೋರಿದೆ
ಯಶದ ಕಲಶವ ಕೈಯಲ್ಲಿತ್ತೆ
ಮಾತೆ ನೀ ಅಭಯಂಕರಿ.

Chanda / Savita Inamdar.

Friday, 5 October 2012

ಕಾಲಚಕ್ರ



ಕಾಲಚಕ್ರ
ಕಾಲ ಚಕ್ರವೆಂದೂ ದಣಿಯೋದಿಲ್ಲ
 ಹರಿಯುವ ನದಿಯೆಂದೂ ಹಿಂದಿರುಗಿ ನೋಡೋದಿಲ್ಲ
ನೀಯಾಕೆ ದಣಿದೆಯೋ ಮನುಜಾ
ಯಾಕಾದ್ಯೋ ನೀ ಬಡಪಾಯಿ?

ಹಗಲು ರಾತ್ರಿಗಳು ಬಂದು ಹೋಗತ್ತವೆ
ಕಿವಿಯೊಳಗೇನೋ ಹೇಳಿ ಹೋಗತ್ತವೆ
ಇದು ಆ ದೇವರ ಮಾಯೆ
ಒಮ್ಮೆ ಬಿಸಿಲು  ಮತ್ತೊಮ್ಮೆ ಛಾಯೆ.

ಕಪ್ಪು ಮೋಡಗಳೇ  ಬೆಳ್ಳಿ ಮೋಡಗಳೇ
ಆಗಸವನ್ನೆಲ್ಲಾ ಆವರಿಸಿರಲಿ
ಅದೆಷ್ಟೇ ಕರಿ ಬಣ್ಣವ  ಬಳಿದರೂ ಸಹ
ಸೂರ್ಯನ ಕಿರಣವ ತಡೆಯಲಾರವು.

ನೀಯಾಕೆ ನಿಂತೆಯೋ ಮನುಜಾ
ಧೈರ್ಯವನ್ಯಾಕೆ ಕಳೆದುಕೊಂಡೆ ??
ನೀ ಮುಂದ ಸಾಗಬೇಕು ನೀ ಮುಂದಕ್ಕ ಹೋಗಬೇಕು.
ನಿನ್ನನೇ ನೀನು ಮೊದಲು ಗೆಲ್ಲಬೇಕು. 

ಚಂದಾ / ಸವಿತಾ ಇನಾಮದಾರ್.